ಇಂಗ್ಲೆಂಡ್: ಸದ್ಯ ವಿಶ್ವಕಪ್ ಕ್ರಿಕೆಟ್ ಮಹಾಸಮರ ಕಾವು ಜಗತ್ತಿನಾದ್ಯಂತ ಜೋರಾಗಿದ್ದು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಇನ್ನು ಗಲ್ಲಿ ಕ್ರಿಕೆಟ್ ಆಡುವ ಹುಡುಗರಿಗೆ ಇದೊಂದು ಸುವರ್ಣಾವಕಾಶ. ಕ್ರಿಕೆಟ್ ಆಡುವುದನ್ನು ಟಿಕ್ ಟಾಕ್ ವಿಡಿಯೋ ಮಾಡಿ ವಿಶ್ವಕಪ್ ಚಾಲೆಂಜ್ ನಲ್ಲಿ ಶೇರ್ ಮಾಡಿ ಇಂಗ್ಲೆಂಡ್ ಗೆ ಹೋಗುವ ಅವಕಾಶ ಪಡೆಯಬಹುದು.
ಟಿಕ್ ಟಾಕ್ ಸದ್ಯ ತಮ್ಮ ಬಳಕೆದಾರರನ್ನು ಹೆಚ್ಚಿಸುವ ಸಲುವಾಗಿ #CricketWorldCup ಹೊಸ ಚಾಲೆಂಜ್ ಅನ್ನು ಶುರು ಮಾಡಿದೆ. ಇದರಲ್ಲಿ ಗೆದ್ದ ಒಬ್ಬರಿಗೆ ಇಂಗ್ಲೆಂಡ್ ನಲ್ಲಿ ಪಂದ್ಯ ನೋಡುವ ಅವಕಾಶವನ್ನು ಟಿಕ್ ಟಾಕ್ ಸಂಸ್ಥೆ ಕಲ್ಪಿಸಲಿದೆ.
ಈ ಮಾಹಿತಿ ನೋಡಿದ ಅನೇಕ ಯುವಕರು ಅದಾಗಲೇ ವಿಡಿಯೋಗಳನ್ನು ಟ್ಯಾಗ್ ಮಾಡುತ್ತಿದ್ದು ಸದ್ಯ 1 ಲಕ್ಷಕ್ಕೂ ಹೆಚ್ಚು ವಿಡಿಯೋಗಳು ಅಪ್ ಲೋಡ್ ಆಗಿವೆ.