ಮಂಜೇಶ್ವರ: ಮಂಜೇಶ್ವರದ ಸಂಯೋಜಿತ ಶಿಶು ಅಭಿವೃದ್ದಿ ಯೋಜನೆಯ ನೇತೃತ್ವದಲ್ಲಿ ಹದಿಹರೆಯದ ಮಕ್ಕಳಿಗಾಗಿ "ಸೇಫ್ ಝೋನ್" ವನಿತಾ ಸೆಲ್ ಕಾಸರಗೋಡು ಸಹಕಾರದೊಂದಿಗೆ ಸ್ವ ರಕ್ಷಣಾ ತರಬೇತಿಯು ಇತ್ತೀಚೆಗೆ ಮಂಜೇಶ್ವರ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಮಂಜೇಶ್ವರ ಸಂಯೋಜಿತ ಶಿಶು ಅಭಿವೃದ್ದಿ ಯೋಜನೆಯ ಅಧಿಕಾರಿ ಸುಧಾಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪೋಲೀಸ್ ಅಧಿಕಾರಿ ಶಶಿಧರನ್ ಉದ್ಘಾಟಿಸಿದರು. ಮಹಿಳಾ ಸೆಲ್ ಅಧಿಕಾರಿಗಳಾದ ಸೈದಾ, ಜಯಶ್ರೀ, ಆಪ್ತ ಸಮಾಲೋಚಕಿಯರಾದ ಸರಕಾರಿ ಫ್ರೌಢಶಾಲೆ ಪೈವಳಿಕೆ ನಗರದ ಮಮತ, ಸರಕಾರಿ ಫ್ರೌಢಶಾಲೆ ಪೈವಳಿಕೆಯ ಸುಚಿತ ಉಪಸ್ಥಿತರಿದ್ದು ಶುಭಹಾರೈಸಿದರು. ಶೃತಿ ಹರೀಶ್ ಸ್ವಾಗತಿಸಿ, ಶಿಕ್ಷಕಿ ಟೋಲ್ಸಿ ಟೋಮ್ ವಂದಿಸಿದರು. ಸುಮಾರು 60ಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿನಿಯರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.