HEALTH TIPS

ಎಂತ ಕಾಲ ಬಂತಪ್ಪೋ!- ಟಿಕ್‍ಟಾಕ್ ಬಳಸಬೇಡ ಎಂದದ್ದಕ್ಕೆ ಗೃಹಿಣಿ ಆತ್ಮಹತ್ಯೆ, ವಿಷ ಸೇವಿಸೋದನ್ನೂ ಟಿಕ್ ಟಾಕ್ ನಲ್ಲೇ ಶೇರ್ ಮಾಡಿದಳು

       
      ಚೆನ್ನೈ: ಟಿಕ್‍ಟಾಕ್ ಆಪ್ ಇತ್ತೀಚೆಗೆ ಬಹಳವೇ ಜನಪ್ರಿಯವಾಗುಉತ್ತಿದ್ದು ಯುವಜನತೆ ಸೇರಿ ಎಲ್ಲಾ ವಯೋಮಾನದವರಲ್ಲಿಯೂ ಹೊಸ ಕ್ರೇಜ್ ಒಂದನ್ನು ಹುಟ್ಟು ಹಾಕಿದೆ. ಆದರೆ ಇಲ್ಲೊಬ್ಬ ಗೃಹಿಣಿ ಪತಿ "ಟಿಕ್‍ಟಾಕ್ ನಲ್ಲೇ ಸಮಯ ಕಳೆಯಬೇಡ, ಆ ಸಮಯವನ್ನು ಪತಿಯಾದ ನನಗೆ, ಮಕ್ಕಳಿಗೆ ನೀಡು" ಎಂದು ಹಿತವಚನ ಹೇಳಿದ್ದಕ್ಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರಿನಲ್ಲಿ ನಡೆದಿದೆ.
    ಪೆರಂಬೂರ್ ಮೂಲದ ಅನಿತಾ(24) ಹೀಗೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಕೀಟನಾಶಕ ಸೇವಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವೀಡಿಯೋವನ್ನೂ ಸಹ ಆಕೆ ಟಿಕ್‍ಟಾಕ್ ನಲ್ಲಿ ಹರಿಬಿಟ್ಟಿದ್ದಾಳೆ! ಈಕೆ ಪಳನಿವೇಲ್ ಎಂಬುವವನ ಪತ್ನಿಯಾಗಿದ್ದು ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ ಎರಡು ವರ್ಷದ ಗಂಡು ಮಗುವಿನ ತಾಯಿ.
        ಏನಾಯಿತು:
    ಕೃಷಿ ವ್ಯಾಪಾರಿಯಾಗಿರುವ ಪಳನಿವೇಲನ್ ವರ್ಷಗಳ ಹಿಂದೆ ಸಿಂಗಾಪುರಕ್ಕೆ ತೆರಳಿದ್ದರು. ಇನ್ನು ತನ್ನ ಸ್ನೇಹಿತೆಯ ಮೂಲಕ ಟಿಕ್‍ಟಾಕ್ ಬಗ್ಗೆ ತಿಳಿದುಕೊಂಡಿದ್ದ ಅನಿತಾ ಬರಬರುತ್ತಾ ದಿನವಿಡೀ ಅದರಲ್ಲೇ ಮಗ್ನಳಾದಳು.
    ಟಿಕ್‍ಟಾಕ್ ವ್ಯಸನಿಯಾಗಿ ಬದಲಾದ ಈಕೆ ಗಂಡ, ಮನೆ, ಮಕ್ಕಳ ಬಗ್ಗೆ ನಿರ್ಲಕ್ಷ ತೋರಲು ಪ್ರಾರಂಭಿಸಿದಳು. ಇದರಿಂದ ಬೇಸರಗೊಂಡ ಕುಟುಂಬಿಕರು ಅನಿತಾ ಬಗ್ಗೆ ಆಕೆಯ ಪತಿಯಲ್ಲಿ ದೂರಿದ್ದಾರೆ. ಆಗ  ಪಳನಿವೇಲ್ ಅನಿತಾಗೆ ಮೊಬೈಲ್ ನಿಂದ ಟಿಕ್‍ಟಾಕ್ ಆಪ್ ಡಿಲಿತ್ ಮಾಡುವಂತೆ ಹೇಳಿದ್ದು, "ಆಪ್ ಗೆ ನೀಡುವ ಸಮಯವನ್ನು ಮಕ್ಕಳು, ಮನೆಗಾಗಿ ನಿಡು" ಎಂದು ಸಲಹೆ ನೀಡಿದ್ದನು. ಆದರೆ ಇದಕ್ಕೆ ಆಕೆ ನಿರಾಕರಿಸಿದ್ದಾಳೆ ಎನ್ನಲಾಗುತ್ತಿದೆ.
     ಒಮ್ಮೆ ಅನಿತಾ ಟಿಕ್‍ಟಾಕ್ ಆಡುತ್ತಿದ್ದಾಗ ಆಕೆಯ ಮಗಳು ಬಿದ್ದು ಪೆಟ್ಟು ಮಾಡಿಕೊಂಡಿದ್ದಳು. ಆದರೂ ಅನಿತಾ ಮಾತ್ರ ಮಗಳ ಬಗೆಗೆ ಗಮನಿಸದೆ ಟಿಕ್‍ಟಾಕ್  ಆಡುವುದರಲ್ಲೇ ನಿರತವಾಗಿದ್ದಳು. ಇದರಿಂದ ಮತ್ತಷ್ಟು ಬೇಸರಗೊಂಡ ಪತಿ ಹಾಗೂ ಮನೆಯವರು ಅವಳಿಗೆ ಮತ್ತೆ ಬುದ್ದಿವಾದ ಹೇಳಿದ್ದರು. ಆಗೊಮ್ಮೆ ಆಕೆಯ ಪತಿ "ನೀನು ಟಿಕ್‍ಟಾಕ್  ಆಡುವುದನ್ನು ಬಿಡದಿದ್ದರೆ ನಾನು ಮೊಬೈಲ್ ಒಡೆದು ಹಾಕುತ್ತೇನೆ!" ಎಂದಿದ್ದನೆಂದೂ  ಇದರಿಂದ ಬೇಸರಗೊಂಡ ಅನಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿಸುಬಂದಿದೆ.
     ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವೀಡಿಯೋ ಮಾಡಿಟ್ಟಿರುವ ಅನಿತಾ ತನ್ನಿಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಪತಿಗೆ ಹೇಳಿದ್ದಾಳೆ. ಹಾಗೂ ತಾನು ಕೀಟನಾಶಕ ಸೇವನೆ ಮಾಡಿ ಸಾಯುವ ದೃಶ್ಯವನ್ನು ಟಿಕ್‍ಟಾಕ್ ಗೆ ಅಪ್ ಲೋಡ್ ಮಾಡಿದ್ದಾಳೆ.
     ವಿಷ ಸೇವಿಸಿದ್ದ  ಆಕೆಯನ್ನು ಮೊದಲಿಗೆ ಅರಿಯಲೂರ್? ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸಗೆ ಸ್ಪಂದಿಸದೇ ಆಕೆ ಮೃತಪಟ್ಟಿದ್ದಾಳೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries