ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಪ್ರತಿ ತಿಂಗಳು ನಡೆಯುವ ದುರ್ಗಾ ಪೂಜೆ ಜೂನ್ 25 ರಂದು ವಿದ್ಯಾ ಕುಮಾರ್ ಕಾಂಚೋಡು ಉಜ್ರೆ ಅವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ.
ಬೆಳಿಗ್ಗೆ 8 ಕ್ಕೆ ಗಣಪತಿ ಹವನ, ರಾತ್ರಿ 7 ರಿಂದ ಹರಿಹರ ಭಜನಾ ಸಂಘ ಮಾಡತ್ತಡ್ಕ ಅವರಿಂದ ಭಜನಾ ಸೇವೆ, ರಾತ್ರಿ 8.30 ರಿಂದ ದುರ್ಗಾಪೂಜೆ, ಸಾಮೂಹಿಕ ಪ್ರಾರ್ಥನೆ, ಬಳಿಕ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಊರ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ಷೇತ್ರ ಜೀರ್ಣೋದ್ಧಾರಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಲಾಗಿದೆ.