ಕಾಸರಗೋಡು: ಹರಿತ ಕೇರಳಂ ಮಿಷನ್ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆರಂಭಿಸಲಾದ ಪಚ್ಚ ತುರುತ್(ಹಸುರು ನಿರೀಕ್ಷೆ) ಯೋಜನೆಯ ಜಿಲ್ಲಾ ಮಟ್ಟದ ತರಬೇತಿ ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ಜರುಗಿತು.
ಕಿಲಾ ಸಂಸ್ಥೆಯ ಸಹಕಾರದೊಂದಿಗೆ ಸಮಾರಂಭ ನಡೆಯಿತು. ನಗರಗಳಲ್ಲಿ ಮತ್ತು ಗ್ರಾಮಗಳಲ್ಲಿ ಬರಿದಾಗಿರುವ ಜಾಗಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ, ನೌಕರಿ ಖಾತರಿ ಯೋಜನೆಯ, ಸಾಮಾಜಿಕ ಅರಣ್ಯೀಕರಣ ವಿಭಾಗದ, ಕೃಷಿ ಇಲಾಖೆಯ ಸಹಕಾರದೊಂದಿಗೆ ಸಸಿ ನೆಡುವ ಮೂಲಕ ಹಸುರೀಕರಣ ನಡೆಸುವುದು ಯೋಜನೆಯ ಉದ್ದೇಶವಾಗಿದೆ.
ಕೃಷಿ ವಿವಿ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎ.ಅನಿಲ್ ಕುಮಾರ್ ಉದ್ಘಾಟಿಸಿದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಕಾಲೇಜು ಡೀನ್ ಡಾ.ಪಿ.ಆರ್.ಸುರೇಶ್, ಹರಿತ ಕೇರಳಂ ಮಿಷನ್ ಸಂಪನ್ಮೂಲ ವ್ಯಕ್ತಿಗಳಾದ ಕೆ.ಶಶಿಧರನ್ ಅಡಿಯೋಡಿ, ರಾಘವನ್ ಕೆ.ಕೆ., ಜೈವಿಕ ವೈವಿಧ್ಯ ಮಂಡಳೀ ಜಿಲ್ಲಾ ಸಂಚಾಲಕ ಪಿ.ಕೃಷ್ಣನ್, ಎಂ.ಜಿ.ಎನ್.ಆರ್.ಇ.ಜಿ.ಎಸ್ ಜತೆ ಕಾರ್ಯಕ್ರಮ ಅಧಿಕಾರಿ ವಿ.ಕೆ.ದಿಲೀಪ್, ವಿಭಾಗೀಯ ಅರಣ್ಯ ಅಧಿಕರಿ ಪಿ.ಬಿಜು ತರಗತಿ ನಡೆಸಿದರು. 125 ಮಂದಿ ತರಬೇತಿಯಲ್ಲಿ ಭಾಗವಹಿಸಿದರು. ಕಿಲಾ ಸಂಚಾಲಕ ಪ್ಪನ್ ಕುಟ್ಟಮತ್ ಸ್ವಾಗತಿಸಿದರು.