ಮುಳ್ಳೇರಿಯ: ಉಜಂಪಾಡಿ-ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವಿಶೇಷ ಸಭೆ ಸಮಿತಿಯ ಅಧ್ಯಕ್ಷ ಮುಗೇರು ಗೋಪಾಲ ರಾವ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದು ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿತು.
ಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಅರಿಯಡ್ಕ ಚಿಕ್ಕಪ್ಪ ನಾೈಕ್, ಮೊಕ್ತೇಸರ ಎ.ನಾರಾಯಣ ನಾೈಕ್ ಉಜಂಪಾಡಿ, ಸಮಿತಿಯ ಉಪಾಧ್ಯಕ್ಷ ವಿಶ್ವ ವಿನೋದ ಬನಾರಿ, ಕೋಶಾಧಿಕಾರಿ ಮೆಣಸಿನಕಾನ ಗೋಪಾಲಕೃಷ್ಣ ಕುಂಜತ್ತಾಯ ಮಾತನಾಡಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಆರಂಭದಲ್ಲಿ ಸ್ವಾಗತಿಸಿದ ಸಮಿತಿಯ ಕಾರ್ಯಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಸಮಿತಿಯ ಹಾಗೂ ಉಪ ಸಮಿತಿಯ ಸದಸ್ಯರ ಕಾರ್ಯಚಟುವಟಿಕೆ ಹಾಗೂ ಕ್ಷೇತ್ರದ ಶ್ರೀ ತಂತ್ರಿಯವರೊಂದಿಗಿನ ಸಂಪರ್ಕ ಹಾಗೂ ಕ್ಷೇತ್ರದ ಶಿಲ್ಪಿಯವರೊಂದಿಗಿನ ಸಂಪರ್ಕ ಮತ್ತು ಸಹಕಾರದ ಬಗ್ಗೆ ವಿವರಿಸಿದರು.
ಜೊತೆ ಕಾರ್ಯದರ್ಶಿ ಉಜಂಪಾಡಿ ವಿಶ್ವನಾಥ ರೈ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೋಟಿಗದ್ದೆ ಗೋಪಾಲಯ್ಯ ವಂದಿಸಿದರು.