ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೈವಳಿಕೆ ವಲಯದ ಪಾವಳ ಕಾರ್ಯಕ್ಷೇತ್ರದ ಸ್ನೇಹಜ್ಯೋತಿ ಜ್ಞಾನ ವಿಕಾಸ ಕೇಂದ್ರದ ಸಭೆಯು ಗುಲಾಬಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಜ್ಞಾನ ವಿಕಾಸ ಕೇಂದ್ರದಲ್ಲಿ ಸದಸ್ಯರಿಗೆ ನಾನು ಓದಿದ ಪುಸ್ತಕ ವಿಮರ್ಶೆ ಕಾರ್ಯಕ್ರಮದಡಿಯಲ್ಲಿ ಗ್ರಂಥಾಲಯದ ಪುಸ್ತಕಗಳನ್ನು ಓದಿ ಅನಿಸಿಕೆಗಳನ್ನು ಹೇಳುವ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ಅನಿಲ್ ಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸಂಗೀತಾ, ಸಂತೋಷ್ ಫ್ರೆಂಡ್ಸ್ ಕಾರ್ಯದರ್ಶಿ ಕಿಶೋರ್ ಕುಮಾರ ಪಾವಳ ಉಪಸ್ಥಿತರಿದ್ದರು. ಸವಿತಾ ಸ್ವಾಗತಿಸಿ, ಬಿ.ಶಾಂತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.