ಮಂಜೇಶ್ವರ: ಅಲ್ ಫತಾ ಜುಮಾ ಮಸೀದಿ ತೂಮಿನಾಡಿನ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು.
ಸ್ಥಳೀಯ ಹಿರಿಯ ವಿದ್ಯಾರ್ಥಿಗಳಿಗೆ ಉತ್ತಮವಾದ ಇಸ್ಲಾಂ ವಿದ್ಯಾಭ್ಯಾಸವನ್ನು ನೀಡುವ ಉದ್ದೇಶದಿಂದ ತೂಮಿನಾಡು ಅಲ್ ಫತಾ ಜುಮಾ ಮಸೀದಿ ಸಮಿತಿ "ಸ್ವದೇಸ್ ದರ್ಸ್ " ಎಂಬ ಮಹಲ್ ಸಂಭ್ರಮಕ್ಕೆ ಚಾಲನೆ ನೀಡಿದೆ.
ಮಸೀದಿಯಲ್ಲಿ ಸಮಿತಿ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ರವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮವನ್ನು ಉದ್ಯಾವರ ಸಾವಿರ ಜಮಾಅತ್ ಮುದರಿಸ್ ಅಬ್ದುಲ್ ಖಾದರ್ ಮದನಿ ವಿದ್ಯಾರ್ಥಿಗಳಿಗೆ ಹತ್ತನೇ ಕಿತಾಬನ್ನು ಕಿರು ಪರಿಚಯಿಸುವ ಮೂಲಕ ಉದ್ಘಾಟಿಸಿದರು.
ಸ್ಥಳೀಯರಾದ ಅಬ್ದುಲ್ ಲತೀಫ್ ಬಾಬಾ, ಸತ್ತಾರ್, ಇಸ್ಮಾಯಿಲ್ ಎಂ ಪಿ, ಬಶೀರ್ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಮಾಡಿದ ಪಠ್ಯ ಪುಸ್ತಕಗಳನ್ನು ಡಾ.ಅಬ್ದುಲ್ ಖಾದರ್ ಮದನಿ ವಿದ್ಯಾರ್ಥಿಗಳಿಗೆ ವಿತರಿಸಿದರು. ಮಸೀದಿ ಖತೀಬ್ ಅಬ್ದುಲ್ ರಹ್ಮಾನ್ ಹರ್ಷದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸೀದಿ ಕಾರ್ಯದರ್ಶಿ ಟಿ ಎಂ ಮಹಮೂದ್, ಮನ್ಸೂರ್, ಕುಂಞÂ ಮೋನು, ಅಧ್ಯಾಪಕರುಗಳಾದ ಅಬ್ದುಲ್ ರವೂಫ್ ಫೈಜಿ, ಅಬೂಬಕ್ಕರ್ ಮುಸ್ಲಿಯಾರ್, ಶಫಿಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.