ಕೊಲಂಬೊ: ನಾನಾ ವಿಚಾರಗಳಲ್ಲಿ ಸಾಗರೋತ್ತರ ಭಾರತೀಯ ಸಮುದಾಯ ಹಾಗೂ ಭಾರತ ಸರ್ಕಾರದ ದೃಷ್ಟಿಕೋನ ಒಂದೇ ರೀತಿಯಲ್ಲಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂಡಿಯಾ ಹೌಸ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಭಾನುವಾರ ಮಾತನಾಡಿದ ನರೇಂದ್ರ ಮೋದಿ, ವಿಶ್ವಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಾಗಿರುವುದಕ್ಕೆ ಅನಿವಾಸಿ ಭಾರತೀಯರ ಕೊಡುಗೆ ಮಹತ್ವದಾಗಿದೆ. ಏಲ್ಲಿಯೇ ಹೋದರು ಅನಿವಾಸಿ ಭಾರತೀಯ ಭಾರತೀಯರ ಯಶಸ್ಸು ಹಾಗೂ ಸಾಧನೆಗಳನ್ನು ಹೇಳುವುದಾಗಿ ತಿಳಿಸಿದರು.
ಇಂಡಿಯಾ ಹೌಸ್ ನಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅನಿವಾಸಿ ಭಾರತೀಯರು ಭಾಷಣದ ನಂತರ ನರೇಂದ್ರ ಮೋದಿ ಅವರಿಗೆ ಹಸ್ತ ಲಾಘವ ಮಾಡುವ ಮೂಲಕ ಅಭಿನಂದಿಸಿದರು.
ಇದಕ್ಕೂ ಮೊದಲು ನರೇಂದ್ರ ಮೋದಿ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಹಾಗೂ ವಿರೋಧ ಪಕ್ಷದ ನಾಯಕ ಮಹಿಂದಾ ರಾಜಪಕ್ಸ ಅವರೊಂದಿಗೆ ಮಾತುಕತೆ ನಡೆಸಿದರು.