ಬದಿಯಡ್ಕ: ಶಿಕ್ಷಣ ಕ್ಷೇತ್ರದ ಸಮಗ್ರ ವಿಕಾಸಕ್ಕಾಗಿ ಸರಕಾರ ವ್ಯಾಪಕ ಬೆಂಬಲಗಳನ್ನು ನೀಡುತ್ತಿದ್ದು, ಸಮರ್ಪಕ ಬಳಕೆ ಅಗತ್ಯವಿದೆ. ಪುಟಾಣಿಗಳಿಗೆ ಶಿಕ್ಷಣ ಪ್ರವೇಶವನ್ನು ನೀಡುವ ಮೂಲಕ ಕ್ರಿಯಾತ್ಮಕತೆಗೆ ಪ್ರೋತ್ಸಾಹ ನೀಡುವ ಚಟುವಟಿಕೆಗಳಿಗೆ ನೆರವಾಗುವ ಪೂರ್ವ ಪ್ರಾಥಮಿಕ ತರಗತಿಗಳು ಗ್ರಾಮೀಣ ಪ್ರದೇಶದ ಮಕ್ಕಳ ಬೆಳವಣಿಗೆಗೆ ಪೂರಕ ಎಂದು ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಅವರು ತಿಳಿಸಿದರು.
ಪೆರಡಾಲ ನವಜೀವನ ವಿದ್ಯಾಲಯದ ಪೂರ್ವಪ್ರಾಥಮಿಕ ಶಾಲೆ(ಪ್ರಿ-ಪ್ರೈಮರಿ) ಯಲ್ಲಿ ಗುರುವಾರ ನಡೆದ ಪ್ರವೇಶೋತ್ಸವದ ಸಂದರ್ಭ ಪುಟಾಣಿಗಳಿಗೆ ಹಾಲು ವಿತರಿಸಿ ಸ್ವಾಗತ ನೀಡಿ ಅವರು ಮಾತನಾಡಿದರು.
ಶಾಲಾ ಆಡಳಿತಾಧಿಕಾರಿ ವೆಂಕಟರಾಜ ಕಬೆಕ್ಕೋಡು, ಶಿಕ್ಷಕಿಯರು ಈ ಸಂದರ್ಭ ಉಪಸ್ಥಿತರಿದ್ದರು.