ಮಂಜೇಶ್ವರ: ಒಂದು ಭಾಷೆಯ ನಾಶದೊಂದಿಗೆ ಸಂಸ್ಕøತಿಯ ನಾಶ ಆಗುವ ಸಾಧ್ಯತೆಯಿದೆಯೆಂದು ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಅವರು ಅಭಿಪ್ರಾಯಪಟ್ಟರು. ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ಮಲಯಾಳಿ ಅಧಿಕಾರಿಗಳು ದಬ್ಬಾಳಿಕೆಯ ಮೂಲಕ ಮಲಯಾಳವನ್ನು ಹೇರುತ್ತಿದ್ದಾರೆಂದು ಅವರು ತಿಳಿಸಿದರು.
ಕನ್ನಡ ಹೋರಾಟ ಸಮಿತಿಯ ವರ್ಕಾಡಿ ಪ್ರಾದೇಶಿಕ ಕನ್ನಡಿಗರ ಇತ್ತೀಚೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ವರ್ಕಾಡಿ ಪಂಚಾಯತಿ ಮಟ್ಟದ ಪ್ರಾದೇಶಿಕ ಸಮಿತಿಯ ಅಧ್ಯಕ್ಷರನ್ನಾಗಿ ಸತ್ಯನಾರಾಯಣ ಮಾಸ್ತರ್, ಪ್ರಧಾನ ಕಾರ್ಯದರ್ಶಿಯಾಗಿ ಪಾರ್ವತಿ ದಿನೇಶ್ ಅವರು ಆಯ್ಕೆಯಾದರು. ಶೇಷಪ್ಪ ಅರೆಂಗುಲ, ಸುರೇಶ, ಕೇಶವ ಭಟ್, ದಿನೇಶ್ ಭಟ್, ವೆಂಕಟೇಶ್ವರ ಭಟ್ ಮೊದಲಾದವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಅವರು ಪ್ರಸ್ತುತ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.