ಕಾಸರಗೋಡು: ನೌಕರಿ ಖಾತೆ ವತಿಯಿಂದ ವಿಶ್ವ ಬಾಲಕಾರ್ಮಿಕತನ ವಿರುದ್ಧ ದಿನಾಚರಣೆ ಕಾಞÂಂಗಾಡಿನಲ್ಲಿ ಶುಕ್ರವಾರ ಜರುಗಿತು.
ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು ಉದ್ಘಾಟಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಎ.ಷಾಜು ಅಧ್ಯಕ್ಷತೆ ವಹಿಸಿದ್ದರು. ರಸಪ್ರಸ್ನೆ ಸ್ಪರ್ಧಾ ವಿಜೇತರಿಗೆ ಕಾ?ಂಗಾಡ್ ಜಿಲ್ಲಾ ಶಿಕ್ಷಣಾಧಿಕಾರಿ ಕೆ.ವಿ.ಪುಷ್ಪಾ ಬಹುಮಾನ ವಿತರಿಸಿದರು. ಡಿ.ಪಿ.ಸಿ.ಯು. ಲೀಗಲ್ ಕಂ ಪ್ರೊಬೇಷನ್ ಅಧಿಕಾರಿ ಎ.ಶ್ರೀಜಿತ್ ಜಾಗೃತಿ ತರಗತಿ ನಡೆಸಿದರು. ಕಾ?ಂಗಾಡ್ ಸಹಾಯಕ ಕಾರ್ಮಿಕ ಅಧಿಕಾರಿ ವಿ.ಎಂ.ಕೃಷ್ಣನ್ ಸ್ವಾಗತಿಸಿದರು. ಕಾಸರಗೋಡು ಸಹಾಯಕ ಕಾರ್ಮಿಕ ಅಧಿಕಾರಿ ಎಂ.ಜಯಕೃಷ್ಣನ್ ವಂದಿಸಿದರು.