HEALTH TIPS

ಹಲಸು-ಗೋವು ಸಂಬಂಧ ಮನುಷ್ಯ ಜೀವನಕ್ಕೆ ಪೂರಕ : ವೆಂಕಟಕೃಷ್ಣ ಶರ್ಮ ಮುಳಿಯ ಬದಿಯಡ್ಕದಲ್ಲಿ ಮೊದಲ ಬಾರಿಗೆ ನಡೆದ ಹಲಸು-ಗೋವು ವಿಚಾರಗೋಷ್ಠಿಯಲ್ಲಿ ಅಭಿಮತ

             
       ಬದಿಯಡ್ಕ: ಮನುಷ್ಯ ಜೀವನದಲ್ಲಿ ಸುಲಭ ಅನ್ನುವುದು ಯಾವುದೂ ಇಲ್ಲ. ಯಾವುದೇ ಕೆಲಸವನ್ನಾದರೂ ಶ್ರಮವಹಿಸಿ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹಲಸನ್ನು ಬೆಳೆಸೆವುವ ಮೂಲಕ ಪ್ರಕೃತಿಯ ರಕ್ಷಣೆಯೊಂದಿಗೆ ನಮ್ಮ ಜೀವನದ ರಕ್ಷಣೆ ಸಾಧ್ಯ. ಗೋವು ಹಾಗೂ ಹಲಸಿನೊಂದಿಗೆ ಅವಿನಾಭಾವ ನಂಟನ್ನು ಹೊಂದಿದರೆ ಮನುಷ್ಯ ನೆಮ್ಮದಿಯನ್ನು ಕಾಣಲು ಸಾಧ್ಯವಿದೆ ಎಂದು ಹಲಸಿನ ತಳಿಯ ಸಂರಕ್ಷಣೆಗಾಗಿ ಅನೇಕ ಶಿಬಿರಗಳನ್ನು ಆಯೋಜಿಸಿದ, ಹಲಸು ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮ ತಿಳಿಸಿದರು.
       ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆ, ಬದಿಯಡ್ಕ ಮಹಿಳೋದಯ ಹಾಗೂ ಗೋಭಕ್ತರ ಸಹಕಾರದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ ಹಲಸುಮೇಳದ ಸಂದರ್ಭದಲ್ಲಿ ಆಯೋಜಿಸಲಾದ ಗೋವು-ಹಲಸು ಎಂಬ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಪಾಲ್ಗೊಂಡು ಸಂವಾದದಲ್ಲಿ ಮಾಹಿತಿಯನ್ನು ನೀಡಿ ಮಾತನಾಡಿದರು.
      ಹಲಸಿನ ಎಲೆಯು ಸಾಕಷ್ಟು ಔಷಧೀಯ ಅಂಶಗಳನ್ನು ಹೊಂದಿದೆ. ಎಲೆಯು ಬಾಡಿದ ಮೇಲೆ ಅದನ್ನು ನಮ್ಮ ದನಗಳಿಗೆ ಆಹಾರವಾಗಿ ಉಪಯೋಗಿಸಬಹುದು. ಹಲಸಿನಲ್ಲಿ ನಿರುಪಯುಕ್ತ ವಸ್ತು ಎಂಬುದೇ ಇಲ್ಲ. ಮನುಷ್ಯ ಹಾಗೂ ಗೋವುಗಳಿಗೆ ಹಲಸಿನಿಂದ ಸಾಕಷ್ಟು ಪ್ರಯೋಜನಗಳಿವೆ. ಹಲಸಿನ ಬೀಜದಲ್ಲಿ ಪ್ರೋಟೀನ್ ಹಾಗೂ ಖನಿಜಾಂಶಗಳು ಇರುವುದರಿಂದ ಹಾಲು ವೃದ್ಧಿಯಾಗುತ್ತದೆ. ದನಗಳ ಆಹಾರಕ್ಕೆ ಪ್ರತಿ ದಿನಕ್ಕೆ 5ಕೆಜಿ ಹಸಿ ರಚ್ಚೆ ಬಳಸುವುದರಿಂದ ಯಾವುದೇ ತೊಂದರೆ ಇಲ್ಲ. ಹಸಿರಚ್ಚೆಯನ್ನು ಉಯೋಗಿಸಿ ಹಿಂಡಿ ವೆಚ್ಚದಲ್ಲಿ ಉಳಿತಾಯವನ್ನು ಮಾಡಬಹುದಾಗಿದೆ. ರಚ್ಚೆಯನ್ನು ಸಣ್ಣ ತುಂಡುಗಳನ್ನಾಗಿ ಉಪ್ಪು ನೀರಿನಲ್ಲಿ ಮುಳುಗಿಸಿ ತೆಗೆದು ಒಣಗಿಸಿಟ್ಟರೆ, ಡಿಸೆಂಬರ್ ತಿಂಗಳಿಂದ ಆಗಸ್ಟ್ ವರೆಗೆ  ಹಲಸು ಸೀಸನ್ ಮುಗಿದರೂ ಬಳಸಬಹುದು. ಹಲಸಿನ ಗೂಂಜನ್ನು ನಿವಾರಿಸಿ ಹಸುಗಳಿಗೆ ಆಹಾರವಾಗಿ ನೀಡಬೇಕು. ಹೋರಿಗಳನ್ನು ಪ್ರತ್ಯೇಕವಾಗಿ ಕಟ್ಟುವ ಅಗತ್ಯವಿಲ್ಲ. ಸಾಂಸಾರಿಕ ಮನೋವ್ಯವಸ್ಥೆಗೆ ಹಸುಗಳನ್ನು ಹೊರಗುಳಿಸಬಾರದು ಎಂದು ಅವರು ತಿಳಿಸಿದರು. ಜಾನುವಾರುಗಳ ದೈಹಿಕ ಚಟುವಟಿಕೆಗಳನ್ನು ಉತ್ತಮಪಡಿಸಿಕೊಳ್ಳಲು ಅವುಗಳಿಗೆ ಸಾಕಷ್ಟು ವ್ಯಾಯಾಮ ಲಭಿಸುವಂತೆ ಮಾಡಬೇಕು. ಹಸುಗಳಿಗೆ ಲಭ್ಯವಾಗುವ ಬಿಸಿಲು, ಗಾಳಿ, ಬೆಳಕು ಸಮಪ್ರಮಾಣದಲ್ಲಿದ್ದರೆ ಉತ್ತಮ ಆರೋಗ್ಯದಿಂದಿರುತ್ತವೆ. ಹಲಸು ಪ್ರತೀ ಮನೆಯಲ್ಲಿ ಬೆಳೆಸಬೇಕು. ಶೀಘ್ರ ಫಸಲಿನ ಹಲಸು ಗಿಡಗಳನ್ನು ಮಾತ್ರವಲ್ಲದೆ ಮಧ್ಯಮ ಅವಧಿ, ದೀರ್ಘ ಅವಧಿಯಲ್ಲಿ ಫಸಲು ನೀಡುವ ಗಿಡಗಳನ್ನು ಬೆಳೆಸಬೇಕು ಎಂದರು.
      ಇದೇ ಸಂದರ್ಭದಲ್ಲಿ ಕಾಸರಗೋಡು ಸಿಪಿಸಿಆರ್‍ಐಯ ಸಂಶೋಧಕಿ ಡಾ. ಸರಿತಾ ಹೆಗ್ಡೆ ಹಲಸಿನ ವಿವಿಧ ಉತ್ಪನ್ನಗಳು ಹಾಗೂ ಹಲಸಿನ ಕುರಿತಾದ ಅನೇಕ ಮಾಹಿತಿಗಳನ್ನು ನೀಡಿದರು. ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
 
* ಹಲಸು-ಗೋವಿನ ಕುರಿತಾಗಿ ಇದೇ ಮೊದಲ ಬಾರಿಗೆ ನಡೆದ ಸಂವಾದ ಕಾರ್ಯಕ್ರಮ
* ಸಂಪನ್ಮೂಲ ವ್ಯಕ್ತಿಗಳಾದ ಮುಳಿಯ ವೆಂಕಟಕೃಷ್ಣ ಶರ್ಮರು 2011 ರಿಂದ 2013 ತನಕ 80 ವಿಧದ ಹಲಸಿನ ತೋಟಗಳನ್ನು ಮಾಡಿದ್ದಾರೆ. ಹಲಸಿನ ತಳಿಯ ಸಂರಕ್ಷಣೆ ಗೆ ಅನೇಕ ಶಿಬಿರಗಳನ್ನು ಆಯೋಜಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries