ಮುಳ್ಳೇರಿಯ: ಏಳನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾದ ಯುಎಸ್‍ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ವಿಘ್ನರಾಜ್ ಎಸ್. ಅವರನ್ನು ಸೋಮವಾರ ಶಾಲಾ ಅಸೆಂಬ್ಲಿಯಲ್ಲಿ ಅಭಿನಂದಿಸಲಾಯಿತು.
ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಫಲಕ ನೀಡಿ ಗೌರವಿಸಿದರು. ಹಿರಿಯ ಶಿಕ್ಷಕ ಕುಂಞÂರಾಮ ಮಣಿಯಾಣಿ, ಸಿಬ್ಬಂದಿ ಕಾರ್ಯದರ್ಶಿ ಮೋಹನನ್, ಹಿರಿಯ ಪ್ರಾಥಮಿಕ ಕನ್ನಡ ವಿಭಾಗ ಅಧ್ಯಾಪಕ ಸದಾಶಿವ ಶರ್ಮ, ಜಲಜಾಕ್ಷಿ, ಗೀತಾಂಜಲಿ, ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು.