ಮುಳ್ಳೇರಿಯ: ಕುಟುಂಬಶ್ರೀ ಜಿಲ್ಲಾ ಮಿಷನ್ ಸ್ನೇಹಿತ ಜೆಂಡರ್ ಹೆಲ್ಪ್ ಡೆಸ್ಕ್ ನೇತೃತ್ವದಲ್ಲಿ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ನೇಹಿತ ಶಾಲಾ ತರಬೇತಿಗೆ ಚಾಲನೆ ನೀಡಲಾಯಿತು.
ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಮಿಶನ್ ಸಂಯೋಜಕಿ ಆರತಿ ಯೋಜನೆಯನ್ನು ಪರಿಚಯಿಸಿ ಮಾತನಾಡಿ, ಶಾಲೆಯನ್ನು ಮುಖ್ಯ ಕೇಂದ್ರವಾಗಿಸಿ ತಿಂಗಳಲ್ಲಿ ಒಂದು ದಿನ ಸ್ನೇಹಿತ ಸೇವೆಯನ್ನು ಮಕ್ಕಳಿಗೆ ತಲಪಿಸುವುದು, ಮಾಹಿತಿ, ಸಲಹೆ ನೀಡುವುದು, ಶಾಲೆಗೆ ತೆರಳದ ಮಕ್ಕಳನ್ನು ಗುರುತಿಸಿ ತೆರಳುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಂಯೋಜಕಿ ಶಿಜ ಉಪಸ್ಥಿತರಿದ್ದು, ಸ್ನೇಹಿತ ಸರ್ವೀಸ್ ಪೆÇ್ರವೈಡರ್ ಜಿತು ಸ್ನೇಹಿತ ಯೋಜನೆಯ ಕುರಿತು ತರಗತಿ ನೀಡಿದರು. ಶಿಕ್ಷಕಿ ಸ್ಮಿತಾ, ನಿನಿ, ನಜುಮುನ್ನೀಸಾ, ಶಿಕ್ಷಕ ಜಿಸನ್, ಸಿಬ್ಬಂದಿ ಕಾರ್ಯದರ್ಶಿ ಮೋಹನನ್ ಉಪಸ್ಥಿತರಿದ್ದರು.