ಬದಿಯಡ್ಕ: ಬದಿಯಡ್ಕದಲ್ಲಿ ನೂತನ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಪಟ್ಟ ಇಲಾಖೆಯು ಅತಿ ಶೀಘ್ರದಲ್ಲಿ ಮುಂದುವರಿಯಬೇಕೆಂದು ಬದಿಯಡ್ಕ ಮರ್ಚೆಂಟ್ಸ್ ಮತ್ತು ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್‍ನ ವಾರ್ಷಿಕ ಮಹಾಸಭೆಯಲ್ಲಿ ಆಗ್ರಹಿಸಲಾಯಿತು.
ಸೋಮವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆದ ಮಹಾಸಭೆಯಲ್ಲಿ ಬದಿಯಡ್ಕ ಘಟಕದ ಅಧ್ಯಕ್ಷ ಎಸ್.ಎನ್.ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶರೀಫ್ ಮಹಾಸಭೆಯನ್ನು ಉದ್ಘಾಟಿಸಿದರು. ಘಟಕದ ಪ್ರ.ಕಾರ್ಯದರ್ಶಿ ಕೆ.ಮುಹಮ್ಮದ್ ಕುಂಞÂ ಹಾಜಿ ಕುಂಜಾರು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಬಿ.ದಿವಾಕರ ಶೆಣೈ ಆಯ ವ್ಯಯ ಮಂಡಿಸಿದರು. ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ ರೈ, ಕುಂಬಳೆ ಘಟಕದ ಅಧ್ಯಕ್ಷ ವಿಕ್ರಂ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಘಟನೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ನೂತನ ಅಧ್ಯಕ್ಷರಾಗಿ ಕುಂಜಾರು ಮುಹಮ್ಮದ್ ಕುಂಞÂ ಹಾಜಿ, ಕಾರ್ಯದರ್ಶಿಯಾಗಿ ನರೇಂದ್ರ ಬಿ.ಎನ್., ಖಜಾಂಚಿಯಾಗಿ ಜ್ಞಾನದೇವ ಶೆಣೈ, ಉಪಾಧ್ಯಕ್ಷರುಗಳಾಗಿ ರವಿ ಎಂ., ರಾಜು ಸ್ಟೀಫನ್ ಕ್ರಾಸ್ತ, ಜೊತೆಕಾರ್ಯದರ್ಶಿಗಳಾಗಿ ಅಬ್ದುಲ್ ಹಮೀದ್, ಉದಯಶಂಕರ ಅವರನ್ನೊಳಗೊಂಡ 27 ಮಂದಿ ಸದಸ್ಯರ ಸಮಿತಿಗೆ ರೂಪುನೀಡಲಾಯಿತು.