ಕುಂಬಳೆ: ಇಲ್ಲಿನ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ ಟ್ರಸ್ಟ್ ಮಂಡಳಿಯ ವಾರ್ಷಿಕ ಮಹಾಸಭೆಯು ಸದ್ರಿ ದೇವಸ್ಥಾನದಲ್ಲಿ ಎಂ.ರಾಮಚಂದ್ರ ಗಟ್ಟಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಸರ್ವಾನುಮತದೊಂದಿಗೆ ಹೊಸ ಆಡಳಿತ ಮಂಡಳಿಯನ್ನು ರೂಪೀಕರಿಸಲಾಯಿತು. ವಾರ್ಷಿಕ ವರದಿಯನ್ನು ಸುರೇಶ್ ಕೆ. ಮಂಡಿಸಿದರು. ಚರ್ಚೆಗಳ ನಂತರ ಮುಂದಿನ ಚಟುವಟಿಕೆಗಳ ಕುರಿತು ತೀರ್ಮಾನಿಸಲಾಯಿತು.
ಹೊಸ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿ ಕೆ.ವಿಶ್ವನಾಥ ನಾಯಕ್, ಅಧ್ಯಕ್ಷರಾಗಿ ಎಂ.ರಾಮಚಂದ್ರ ಗಟ್ಟಿ, ಸಹ ಅಧ್ಯಕ್ಷರಾಗಿ ಕರುಣಾಕರ ಯಾನೆ ಕರಿಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬಂಬ್ರಾಣ ನಾರಾಯಣ ರೈ, ಜೊತೆ ಕಾರ್ಯದರ್ಶಿಯಾಗಿ ಸುಂದರ ಆರಿಕ್ಕಾಡಿ, ಕೋಶಾಧಿಕಾರಿಯಾಗಿ ಎನ್.ಕೆ.ನಾರಾಯಣ, ಲೆಕ್ಕಪರಿಶೋಧಕರಾಗಿ ಜಯಪ್ರಕಾಶ ಕೆ.ವಿ, ವಿಜಿಲೆಂಟ್ ಅಧಿಕಾರಿ ವಕೀಲರಾದ ಕೆ.ರಾಮ ಪಾಟಾಳಿ ಮತ್ತು ಇತರ ಆಡಳಿತ ಮಂಡಳಿಯ ಸದಸ್ಯರುಗಳಾಗಿ ಲೋಕನಾಥ ಶೆಟ್ಟಿ, ಪ್ರಶಾಂತ ಕುಮಾರ್ ಕೆ, ಸುರೇಶ ಕೆ, ರವೀಂದ್ರನ್ ಸಿ.ಕೆ, ಮಾಧವ ಅಡಿಗ ಕೆ, ಕೆ.ವಿ.ಶಿವರಾಮ, ಕೆ.ಶಂಕರ ಆಳ್ವ, ಮನೋಜ್ ಕುಮಾರ್ ಸಿ, ಅಮರ್‍ನಾಥ್ ಕೆ. ಮತ್ತು ಭುಜೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಬಂಬ್ರಾಣ ನಾರಾಯಣ ರೈ ಸ್ವಾಗತಿಸಿ, ಸುಂದರ ಆರಿಕ್ಕಾಡಿ ವಂದಿಸಿದರು.