ನವದೆಹಲಿ: ಜಾಗತಿಕ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್ ಜಿ ನಿವೃತ್ತರಾಗಲಿದ್ದಾರೆ. ಬರುವ ಜುಲೈ 30ಕ್ಕೆ ಪ್ರೇಮ್ ಜಿ ಸ್ಥಾನದಿಂದ ನಿವೃತ್ತರಾಗುತ್ತಿದ್ದು ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.
ಅಜೀಂ ಪ್ರೇಮ್ ಜಿ ಪುತ್ರ ಮುಖ್ಯ ಕಾರ್ಯತಂತ್ರ ಅಧಿಕಾರಿ ಮತ್ತು ಮಂಡಳಿಯ ಸದಸ್ಯರಾದ ರಷೀದ್ ಪ್ರೇಮ್ ಜಿ ತಂದೆ ನಂತರ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರ ಎನ್ನಲಾಗಿದೆ.
"ಇಂಡಿಯನ್ ಟೆಕ್ನಾಲಜಿ ಉದ್ಯಮದ ಪ್ರವರ್ತಕರು ಮತ್ತು ವಿಪ್ರೊ ಲಿಮಿಟೆಡ್ನ ಸಂಸ್ಥಾಪಕರಾಗಿದ್ದ ಅಜೀಮ್ ಪ್ರೇಮ್ ಜಿ ತನ್ನ ಪ್ರಸ್ತುತ ಅವಧಿಯಬಳಿಕ ಪೂರ್ಣಾವಧಿಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನಿವೃತ್ತರಾಗಲಿದ್ದಾರೆ. ಅವರು ಕಂಪನಿಯನ್ನು 3 ವರ್ಷಗಳ ಕಾಲ ಮುನ್ನಡೆಸಿದ ನಂತರ, ಜುಲೈ 30, 2019 ರಂದು ನಿವೃತ್ತರಾಗುತ್ತಾರೆ. ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿಪ್ರೊ ಪ್ರಕಟಣೆ ಹೇಳಿದೆ.
ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಬಿಧಾಲಿ ಝೆಡ್ ನೀಮಚ್ವಾಲಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮರು-ನೇಮಕ ಆಗಲಿದ್ದಾರೆ. "ಈ ಬದಲಾವಣೆಗಜುಲೈ 31, 2019ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ. ಹಾಗೆಯೇ ಈ ಎಲ್ಲಾ ನಿರ್ಧಾರಗಳೂ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ" ಎಂದು ಕಂಪನಿ ತಿಳಿಸಿದೆ.