ಕಾಸರಗೋಡು: ಸಾಂಸ್ಕøತಿಕ ಸಂಘಟಕ ಗುರುಪ್ರಸಾದ್ ಕೋಟೆಕಣಿ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ಷಷ್ಟ್ಯಬ್ದ ಹರಿಕೀರ್ತನಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಧರ್ಮಾ„ಕಾರಿ ಡಾ|ಡಿ.ವೀರೇಂದ್ರ ಹೆಗ್ಗೆಡೆಯವರು ಗುರುಪ್ರಸಾದ್ ಅವರನ್ನು ಸ್ಮರಣಿಕೆ, ಅಭಿನಂದನ ಪತ್ರ ನೀಡಿ ಅಭಿನಂದಿಸಿದರು.
ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮತಿಯ ಪ್ರಧಾನ ಸಂಚಾಲಕರಾಗಿರುವ ಗುರುಪ್ರಸಾದ್ ಅವರು ಹರಿದಾಸ ಜಯಾನಂದ ಕುಮಾರ್ ಅವರ 60 ನೇ ಹುಟ್ಟು ಹಬ್ಬದಂಗವಾಗಿ ಆಯೋಜಿಸಿದ 60 ಕಡೆಗಳಲ್ಲಿ ಹರಿಕೀರ್ತನಾ ಅಭಿಯಾನದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಸರಗೋಡಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಕನ್ನಡವನ್ನು ಉಳಿಸುವ ಧ್ಯೇಯೋದ್ದೇಶವನ್ನು ಸಾಕಾರಗೊಳಿಸುತ್ತಿದ್ದಾರೆ.
ಧರ್ಮಸ್ಥಳ ವಸಂತ ಮಹಲ್‍ನಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿ.ವಸಂತ ಪೈ ವಹಿಸಿದ್ದರು. ಒಡಿಯೂರು, ಮಾಣಿಲ ಸ್ವಾಮೀಜಿಗಳು ಸಹಿತ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.