ಮಂಜೇಶ್ವರ: ಅನಾಥೋ ದೈವ ರಕ್ಷಕ ಎಂಬ ಸೂಕ್ತಿಯಂತೆ, ಯಾರೂ ಇಲ್ಲದವರಿಗೆ ಭಗವಂತನ ಸ್ನೇಹಹಸ್ತ ಚಾಚುವುದಂತೆ. ಹಾಗೆ, ಸಂತೋಷರ ಪಾಲಿಗೆ ಸ್ನೇಹಾಲಯ ಹಾಗೂ ಮುಂದಿನ ಬಾಳಿಗೆ ಕುಂಞÂ ಮೊಹಿಯುದ್ದೀನರೆಂಬ ಕೇರಳ ನಿವಾಸಿಯು ದೇವರಾಗಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕ ಮೂಲದ 50 ರ ಹರೆಯದ ಸಂತೋಷ್ `ಸ್ನೇಹಾಲಯ'ದ ಅತಿಥಿಯಾದದ್ದು ಕಳೆದ ಫೆಬ್ರವರಿ ಮೂರರಂದು. ಸ್ನೇಹಾಲಯದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಬಂದ ದೂರವಾಣಿ ಕರೆಯಂತೆ ತಲಪ್ಪಾಡಿ ಕೆ.ಸಿ.ರಸ್ತೆ ಬಳಿಗೆ ತೆರಳಿದಾಗ ಕೆಸರು ಗುಂಡಿಯಲ್ಲಿ ಜಳಕವಾಡುತ್ತಿದ್ದ ಮತಿವಿಕಲನನ್ನು ಕಂಡರು. ಅಂಗಿ ಹಾಕದೆ ಏನೇನೋ ಗೊಣಗುತ್ತಾ ಕೆಸರು ಮೆತ್ತಿಸಿ ನರ್ತನವಾಡುತ್ತಿದ್ದಾತನನ್ನು ಮಣಿಸುವುದು ತ್ರಾಸದಾಯಕವೇ ಆಗಿತ್ತಾದರೂ ಆತನನ್ನು ಗಾಡಿಗೆ ಹಾಕಿ ತಂದೇ ಬಿಟ್ಟಿದ್ದರು. ದೇಹ ಶುಚಿಗೊಳಿಸಿ ಒಂದೆರಡು ದಿನ ಪೂರ್ಣ ವಿಶ್ರಾಂತಿಗೆ ಬಿಟ್ಟ ಬಳಿಕ ಯೇನಪೆÇೀಯ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿ ದಾಖಲು ಶುಶ್ರೂಷೆ. ಅಲ್ಲಿಂದ ಮರಳಿ ಕರೆತಂದು ಪ್ರೀತಿಯ ಆರೈಕೆ, ಸ್ನೇಹದ ಸಾಂತ್ವನ. ಹಾಗೆ, ಸಂತೋಷ್ ಈಗ ಪೂರ್ಣ ಮತಿವಂತ. ಕನ್ನಡಿಗನಾಗಿದ್ದರೂ ತನ್ನ ಮೂಲಮನೆ ಗುರುತಿಸಲಾಗುತ್ತಿರಲಿಲ್ಲ. `ಅಲ್ಲಿ ನನಗೆ ಯಾರೂ ಇಲ್ಲ. ಕೇರಳ ರಾಜ್ಯದ ಬಡಗೆರೆಯಲ್ಲಿ ನನ್ನವರಿದ್ದಾರೆ' ಎಂದು ಹೇಳಿ ಬಡಗೆರೆ ನಿವಾಸಿಯಾಗಿರುವ ಕುಂಞÂ ಮೊಹಿಯುದ್ದೀನರನ್ನು ನೆನಪಿಸಿದರು.
ಕುಞÂ ಮೊಹಿಯುದ್ದೀನರ ಮನೆ ತೋಟದಲ್ಲಿ ಸಂತೋಷ್ ಅನೇಕ ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದರಂತೆ. ಆ ಮನೆಯ ಸದಸ್ಯನಂತೆಯೇ ಕಳೆಯುತ್ತಿದ್ದರು. ಹಾಗಿರಲೊಂದು ದಿನ ಐದು ತಿಂಗಳ ಹಿಂದೆ ಸಂತೋಷರು ದಿಢೀರ್ ನಾಪತ್ತೆಯಾಗಿದ್ದರು. ಮೊಹಿಯುದ್ದೀನ್ ಹಲವೆಡೆ ಹುಡುಕಾಡಿದರೂ ಫಲಕಾರಿಯಾಗಿರಲಿಲ್ಲ.
ಹಾಗೆ ಕಣ್ಮರೆಯಾಗಿದ್ದವರು ಸ್ನೇಹಮನೆಯ ಆರೈಕೆಯ ಫಲವಾಗಿ ಪೂರ್ಣ ಗುಣಮುಖರಾಗಿದ್ದಾರೆ. ಮೊಹಿಯುದ್ದೀನರನ್ನು ಗುರುತಿಸಿದ್ದಾರೆ. ಸಂತೋಷರು ನೀಡಿದ ವಿಳಾಸಕ್ಕೆ ಪತ್ರ ರವಾನೆಯಾಯಿತು. ಶನಿವಾರ(ಜೂ.15/ನಿನ್ನೆ) ಕುಂಞÂ ಮೊಹಿಯುದ್ದೀನ್ ಸಂಗಡಿಗರೊಂದಿಗೆ ಸ್ನೇಹಾಲಯಕ್ಕೆ ತಲುಪಿ ಸಂತೋಷರನ್ನು ತನ್ನ ಮನೆಗೆ ಸಂತಸದಿಂದಲೇ ಕರೆದೊಯ್ದರು. ಸಂತೋಷರನ್ನು ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಮೊಹಿಯುದ್ದೀನ್ ತಿಳಿಸಿದ್ದಾರೆ.
(ಚಿತ್ರ ಮಾಹಿತಿ: ಸಂತೋಷ್ ಅಂದು ತಲಪ್ಪಾಡಿ ಕೆ.ಸಿ.ರೋಡಲ್ಲಿ ಮತಿ ವಿಕಲನಾಗಿ ಕಂಡುಬಂದಾಹ ಮತ್ತು ಗುಣಮುಖರಾದ ಸಂತೋಷ್ ಕುಂಞÂ ಮೊಹಿಯುದ್ದೀನ್ ಜೊತೆ ತೆರಳಲು ಸಿದ್ಧರಾಗಿರುವುದು.)