ಕಾಸರಗೋಡು: ಕೇರಳ ಖಾದಿ ಗ್ರಾಮ ಉದ್ದಿಮೆ ಮಂಡಳಿ(ಕೆ.ಕೆ.ವಿ.ಐಬಿ.) ಜಾರಿಗೊಳಿಸುವ ಪ್ರಧಾನ ಮಂತ್ರಿ ಸೃಜನ ಯೋಜನೆ(ಪಿ.ಎಂ.ಇ.ಜಿ.ಪಿ.) ಪ್ರಕಾರ 2019-20 ವರ್ಷದ ಸ್ವ ಉದ್ಯೋಗ ಯೋಜನೆಗಳಿಗೆ ಅರ್ಜಿ ಕೋರಲಾಗಿದೆ.
ಗ್ರಾಮೀಣ ಪ್ರದೆಶಗಳಲ್ಲಿ ಆರಂಭಿಸಲಾಗುವ 25 ಲಕ್ಷ ರೂ. ವರೆಗಿನ ಯೋಜನೆ ವೆಚ್ಚವಿರುವ ಉದ್ದಿಮೆಗಳಿಗೆ ಒಟ್ಟು ಯೋಜನೆ ವೆಚ್ಚದ ಶೇ 25 ರಿಂದ 35 ವರೆಗೆ ಸಬ್ಸಿಡಿ ನೀಡಲಾಗುವುದು. (ನಿರ್ಮಾಣವಲಯ 25 ಲಕ್ಷ ರೂ.ಸೇವಾ ವಲಯ 10 ಲಕ್ಷ ರೂ.).ಕನಿಷ್ಠ 8ನೇ ತರಗತಿ ತೇರ್ಗಡೆಹೊಂದಿರುವವರು ಅರ್ಹರಾಗಿದ್ದಾರೆ. ಬ್ಯಾಂಕ್ ನಿಂದ ಲಭಿಸುವ ಸಾಲದ ತಳಹದಿಯಲ್ಲಿ ಸಬ್ಸಿಡಿ ನೀಡಲಾಗುವುದು. ಪರಿಶಿಷ್ಟ ಜಾತಿ-ಪಂಗಡವರು, ವಿಶೇಷಚೇತನರು, ನಿವೃತ್ತ ಸೈನಿಕರು ಮೊದಲಾದವರಿಗೆ ಆದ್ಯತೆಯಿಎ. ಆನ್ ಲೈನ್ ಎಂಬ ವೆಬ್ ಸೈಟಿನಲ್ಲಿ, ಪಿ.ಎಂ.ಇ.ಜಿ.ಪಿ. ಪೋರ್ಟಲ್ ನಲ್ಲಿ ಕೆ.ವಿ.ಐ.ಬಿ, ಕಾಸರಗೋಡು ಏಜೆನ್ಸಿ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ನಂತರ ಲಭಿಸುವ ಯೂಸರ್ ಐಡಿ,ಪಾಸ್ ವಡ್ರ್ಬಳಸಿ ಸಂಬಂಧಪಟ್ಟ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು. ಫೊಟೋ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ವಿಶೇಷ ವಿಭಾ ಖಚಿತ ಪಡಿಸುವ ಪ್ರಮಾಣಪತ್ರ, ಯೋಜನೆವರದಿ, ಕೊಟೇಷನ್, ಗ್ರಾಮೀಣ ಪ್ರದೆಶ ಖಚಿತಪಡಿಸುವ ಪ್ರಮಾಣ ಪತ್ರ, ಶಿಕ್ಷಣಾರ್ಹತೆ/ಇ.ಡಿ.ಪಿ.ತರಬೇತಿ ಪ್ರಮಾಣ ಪತ್ರ ಈ ಮೂಲಕ ಸಲ್ಲಿಸಬೇಕು. ಸಂಸ್ಥೆಗಳಾಗಿದ್ದರೆ ನೋಂದಣಿ ಪ್ರಮಾಣ ಪತ್ರ, ಬೈ-ಲಾ ಪ್ರತಿಗಳನ್ನು ಹಾಜರುಪಡಿಸಬೇಕು. ಮಾಹಿತಿಗೆ ಸಂಬಂಧಪಟ್ಟ ಕಚೇರಿಯನ್ನು(ದೂರವಾಣಿ ಸಂಖ್ಯೆ: 0467-2200585.) ಸಂಪರ್ಕಿಸಬಹುದು.