ಕಾಸರಗೋಡು: ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ರಂಗಚಿನ್ನಾರಿ ನಡೆಸಿಕೊಂಡು ಬಂದ ಸುಗುಮ ಸಂಗೀತ, ನಾಡಗೀತೆ, ರಂಗಸಂಸ್ಕøತಿ ಇತ್ಯಾದಿ ಶಿಬಿರಗಳು, ಆ ಮೂಲಕ ಸುಮಾರು 5000 ವಿದ್ಯಾರ್ಥಿಗಳನ್ನು ತಲುಪಿರುವ ಮಹತ್ಸಾಧನೆಯ ಬೆನ್ನಿಗೆ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಅದುವೇ ಶಿಕ್ಷಣಕ್ಕಾಗಿ `ತಕಜಣುತಾ....'
ಭಾರತೀಯರದ್ದೇ ಆದ ಭರತನಾಟ್ಯಕ್ಕೆ ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಸ್ಥಾನವಿದೆ. ಕಾಸರಗೋಡಿನ ಕನ್ನಡದ ಮಕ್ಕಳಿಗೆ ಅದರ ಒಂದಷ್ಟು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದೆ.
ಜುಲೈ 2 ರಂದು ಬೆಳಿಗ್ಗೆ 9.30 ಕ್ಕೆ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಶ್ರೀ ಭಾರತೀ ವಿದ್ಯಾಪೀಠದ ಪ್ರಬಂಧಕ ಜಯಪ್ರಕಾಶ ಪಜಿಲ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ.ನಾ.ದಾಮೋದರ ಶೆಟ್ಟಿ ಅವರು ಉದ್ಘಾಟಿಸುವರು. ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬೆಳಿಗ್ಗೆ 11.30 ರಿಂದ ನಡೆಯುವ ಕಾರ್ಯಕ್ರಮವನ್ನು ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಉದ್ಘಾಟಿಸುವರು. ಮುಖ್ಯೋಪಾಧ್ಯಾಯಿನಿ ಪಿ.ಕೆ.ತಂಗಮಣಿ ಅಧ್ಯಕ್ಷತೆ ವಹಿಸುವರು. ಡಾ.ನಾ.ದಾಮೋದರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಮಧ್ಯಾಹ್ನ 1.45 ರಿಂದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಖ್ಯಾತ ವೈದ್ಯ ಡಾ.ಶ್ರೀಪತಿ ಕಜಂಪಾಡಿ ಉದ್ಘಾಟಿಸುವರು. ಮುಖ್ಯೋಪಾಧ್ಯಾಯ ಬಿ.ರಾಜೇಂದ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಡಾ.ನಾ.ದಾಮೋದರ ಶೆಟ್ಟಿ ಭಾಗವಹಿಸುವರು.
ಜುಲೈ 3 ರಂದು ಬೆಳಿಗ್ಗೆ 9.30 ರಿಂದ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಕಾರ್ಯದರ್ಶಿ ಜಯರಾಮ ಮಂಜತ್ತಾಯ ಉದ್ಘಾಟಿಸುವರು. ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಪಿ. ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 11.45 ರಿಂದ ಕಾರಡ್ಕ ಜಿ.ವಿ.ಎಚ್.ಎಸ್. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರು ಉದ್ಘಾಟಿಸುವರು. ಶಾಲಾ ಮುಖ್ಯೋಪಾಧ್ಯಾಯ ಎಂ.ಕರುಣಾಕರ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2 ರಿಂದ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಖ್ಯಾತ ವೈದ್ಯ ಡಾ.ಶಿವ ಕುಮಾರ ಅಡ್ಕ ಉದ್ಘಾಟಿಸುವರು. ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಅಧ್ಯಕ್ಷ ಗಣೇಶ ವತ್ಸ ಅಧ್ಯಕ್ಷತೆ ವಹಿಸುವರು.
ಭರತನಾಟ್ಯದ ಮುದ್ರೆಗಳ ಜೊತೆ ಮಿಡಿಯುವ ಪ್ರಾಥಮಿಕ ತರಬೇತಿಯನ್ನು ಶಾಲಾ ಮಕ್ಕಳಿಗೆ ಆಕಾಶವಾಣಿ ಹಾಗು ದೂನದರ್ಶನ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಮಾರ್ಗದರ್ಶನ ಮಾಡಲಿದ್ದಾರೆ. ಈ ಅಭಿಯಾನವು ಕಾಸರಗೋಡಿನ 5000 ವಿದ್ಯಾರ್ಥಿಗಳನ್ನು ತಲುಪುವ ಗುರಿಯಿರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ನೃತ್ಯ ಶೈಕ್ಷಣಿಕ ಹಾಗು ಸಾಂಸ್ಕøತಿಕವಾದ ಬೆಳವಣಿಗೆಗೆ ಹೇಗೆ ಪೂರಕ ಎಂಬುದನ್ನು ಪರಿಚಯಿಸಲಿದೆ.
ಮುಂದಿನ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತ ಶಾಲಾ ಅಧಿಕೃತರು ಕಾಸರಗೋಡು ಚಿನ್ನ್ನಾ (09447323500) ಅವರನ್ನು ಸಂಪರ್ಕಿಸಲು ಕೋರಲಾಗಿದೆ.