HEALTH TIPS

ಜಿಲ್ಲೆಗೆ ಹಾಲು ಉತ್ಪಾದನೆಯಲ್ಲಿ ಸ್ವಾವಲಂಬಿ ಯಶಸ್ಸು

   
   ಕಾಸರಗೋಡು:  ಹಾಲು ಉತ್ಪಾದನೆ ವಲಯದಲ್ಲಿ ಕಾಸರಗೋಡುಜಿಲ್ಲೆ ಸ್ವಾವಲಂಬಿಯಾಗಿ ಯಶಸ್ಸು ಕಂಡಿದೆ.
      ದಿನವೊಂದಕ್ಕೆ ಸರಾಸರಿ 68.127 ಲೀಟರ್ ಹಾಲು ಜಿಲ್ಲೆಯಲ್ಲಿ ಉತ್ಪಾದನೆಗೊಳ್ಳುತ್ತಿದೆ. 2016-17ರಲ್ಲಿ ಜಿಲ್ಲೆಯಲ್ಲಿ ಹಾಲು ಉತ್ಪಾದಕ ಸಂಘಗಗಳ ಮೂಲಕ ಸರಾಸರಿ 2,07,75,044 ಲೀಟರ್ ಹಾಲು ಉತ್ಪಾದಿಸಲಾಗುತ್ತಿತ್ತು. ಎಂದರೆ ದಿನವೊಂದಕ್ಕೆ 56917 ಲೀಟರ್ ಹಾಲು. 2017-18ರಲ್ಲಿ ಸರಾಸರಿ 2,25,91,145 ಲೀಟರ್ ಹಾಲು ಉತ್ಪಾದಿಸಲಾಗಿತ್ತು. ಎಂದರೆ ದಿನಕ್ಕೆ 61893 ಲೀಟರ್ ಹಾಲು. 2018-19ರಲ್ಲಿ ಸರಾಸರಿ 2,48,66,568 ಲೀಟರ್ ಹಾಲು ಜಿಲ್ಲೆಯಲ್ಲಿ ಉತ್ಪಾದನೆಗೊಳ್ಳುತ್ತಿದೆ. ಎಂದರೆ ದಿನಕ್ಕೆ 68.127 ಲೀಟರ್ ಹಾಲು.
    ಜಿಲ್ಲೆಯಲ್ಲಿ 6 ಬ್ಲಾಕ್ ಗಳಲ್ಲಿ 140 ಹಾಲುಉತ್ಪಾದಕ ಸಂಘಗಳು ಚಟುವಟಿಕೆ ನಡೆಸುತ್ತಿವೆ. ಈ ಮೂಲಕ 8 ಸಾವಿರ ಮಂದಿ ಹಾಲು ಉತ್ಪಾದಕರಿಂದ ದಿನಕ್ಕೆ 70 ಸಾವಿರ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಹಾಲುಉತ್ಪಾದನೆಯಲ್ಲಿ 2016-17ರ ಗಣನೆಯೊಂದಿಗೆ ಹೋಲಿಸಿ ನೋಡಿದರೆ ಶೇ 20 ಹೆಚ್ಚಳ ಉಂಟಾಗಿರುವುದು ಖಚಿತವಾಗಿದೆ.
    ಹಾಲು ಅಭಿವೃದ್ಧಿ ಇಲಾಖೆ ಜಿಲ್ಲೆಯ ಈ ವಲಯದ ಏಳಿಗೆಯ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಹಾಲುಉತ್ಪಾದನೆ ವಲಯದಲ್ಲಿ ನೂತನ ತಂತ್ರಜಾನ ಕುರಿತು ಮಾಹಿತಿ ಒದಗಿಸುವ ಚಟುವಟಿಕೆಗಳು, ಹಾಲುಉತ್ಪಾದಕ ಸಹಕಾರಿ ಸಂಘಗಗಳಿಒಗೆ ಆರ್ಥಿಕ ಸಹಾಯ ಇತ್ಯಾದಿ ಈ ಸಾಲಿಗೆ ಸೇರುತ್ತವೆ. ಹಾಲುನೀಡುವ ಹಸುಗಳ ಹೆಚ್ಚಳ ಉದ್ದೇಶದಿಂದ ಮಿಲ್ಕ್ ಶೆಡ್ ಡೆವೆಲಪ್ ಮೆಂಟ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಪರಪ್ಪ,ನೀಲೇಶ್ವರ, ಕಾ?ಂಗಾಡ್ ಬ್ಲೋಕ್ ಗಳಲ್ಲಿ ಎಂ.ಎಸ್.ಡಿ.ಪಿ. ಡೈರಿ ಝೋನ್ ಯೋಜನೆ, 2018-19 ಆರ್ಥಿಕ ವರ್ಷದಲ್ಲಿ ಪನತ್ತಡಿ ಗ್ರಾಮಪಂಚಾಯತ್ ನಲ್ಲಿ ಹಾಲು ಗ್ರಾಮ ಯೋಜನೆ ಜಾರಿಗೊಳಿಸಲಾಗಿತ್ತು. ಇತರ ರಾಜ್ಯಗಳಿಂದ ಕಳೆದ ಮೂರು ವರ್ಷಗಳಿಂದ 848 ಹಸುಗಳನ್ನು, 365 ಕರುಗಳನ್ನು ಖರೀದಿಸಲಾಗಿದೆ.
     ಹಾಲಿನ ಗುಣಮಟ್ಟ ಹೆಚ್ಚಿಸುವಿಕೆ, ಹಾಲು ಉತ್ಪಾದಕ ಸಂಘಗಗಳಲ್ಲಿ ಗುಣಮಟ್ಟ ತಪಾಸಣೆಯಲ್ಲಿ ನವೀನತಂತ್ರ ಜ್ಞಾ ನ ಬಳಸುವಿಕೆ, ಶುಚಿಯಾಗಿ ಹಾಲು ಬಳಸಿಕೊಳ್ಳುವ ರೀತಿ, ಕಡಿಮೆ ವೆಚ್ಚದಲ್ಲಿ ಅಧಿಕಹಾಲು ಉತ್ಪಾದಿಸುವ ರೀತಿ ಇತ್ಯಾದಿ ಅನುಷ್ಠಾನಗೊಳಿಸಲಾಗುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಹಾಲು ಉತ್ಪಾದಕ ಸಂಘಗಳಲ್ಲಿ ಹಾಲು ಅಳತೆ ಮಾಡುವ ಕೃಷಿಕರಿಗೆ ಹಾಲಿನ ಮೌಲ್ಯವನ್ನುಇಂಟೆನ್ಸೀವ್ ಆಗಿಯೂ ನೀಡಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries