ಕಾಸರಗೋಡು: ವಿದ್ಯಾನಗರದ ಚಿನ್ಮಯ ಅಕಾಡೆಮಿ ಆಫ್ ಅಡ್ವಾನ್ಸ್‍ಡ್ ಸ್ಟಡೀಸ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಅಬಕಾರಿ ಇಲಾಖೆಯ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಮಾದಕ ವಿರುದ್ಧ ದಿನಾಚರಣೆ ಅಂಗವಾಗಿ ಜೂ.26 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ವಿದ್ಯಾನಗರದ ಚಿನ್ಮಯ ಜನ್ಮಶತಾಬ್ಧಿ ಹಾಲ್‍ನಲ್ಲಿ ಯುವ ಸಂಗಮ-2019 ನಡೆಯಲಿದೆ.
ಕಾರ್ಯಕ್ರಮದಲ್ಲಿ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಅಧ್ಯಕ್ಷತೆ ವಹಿಸುವರು. ಕಾಸರಗೋಡು ಡೆಪ್ಯೂಟಿ ಎಕ್ಸೈಸ್ ಕಮೀಷನರ್ ಜೇಕಬ್ ಜೋನ್ ಉದ್ಘಾಟಿಸುವರು. ವಿಶಿಷ್ಟ ಅತಿಥಿಯಾಗಿ ಜಿಲ್ಲಾ ವರಿಷ್ಠ ಪೆÇಲೀಸ್ ಅ„ಕಾರಿ ಜೇಕಬ್ ಜೋನ್ ಭಾಗವಹಿಸಲಿದ್ದಾರೆ. ಸಿಎಎಸ್ ಕಾರ್ಯದರ್ಶಿ ಕೆ.ಬಾಲಚಂದ್ರನ್, ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್, ಚಿನ್ಮಯ ಯುವ ಕೇಂದ್ರದ ವಿ.ಗಣೇಶ್ ಪ್ರಭು ಶುಭಹಾರೈಸುವರು.
ಇದೇ ಸಂದರ್ಭದಲ್ಲಿ ಬಾಲಚಂದ್ರನ್ ಕೊಟ್ಟೋಡಿ ಅವರು `ಯುವ ಜನತೆ ಹಾಗು ಮಾದಕ ಪದಾರ್ಥಗಳು' ಎಂಬ ವಿಷಯದಲ್ಲಿ ತಿಳಿವಳಿಕೆ ಶಿಬಿರ ನಡೆಸುವರು. ಚಿನ್ಮಯ ಯುವ ಕೇಂದ್ರದ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ, ಯುವ ಪ್ರತಿಭೆಗಳ ಕಲಾ ಪ್ರದರ್ಶನ ನಡೆಯಲಿದೆ.