ನವದೆಹಲಿ: ಪ್ರಸಕ್ತ ಆವೃತ್ತಿಯ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಕೇಸರಿ ಬಣ್ಣದ ಜೆರ್ಸಿ ಧರಿಸಿ ಪಂದ್ಯವನ್ನಾಡಲಿದೆ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಿದೆ.
ಇದಕ್ಕೂ ಮೊದಲು ಈ ಸುದ್ದಿ ಕ್ರಿಕೆಟ್ ವಲಯದಲ್ಲಿ ಹರಿದಾಡಿತ್ತು. ಕ್ರಿಕೆಟ್ ಪ್ರೇಮಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುದ್ದಿ ಹಬ್ಬಿಸಿದ್ದರು. ಆದರೆ, ಟೀಮ್ ಇಂಡಿಯಾ ಈ ವಿಶ್ವಕಪ್‍ನಲ್ಲಿ ಕೇಸರಿ ಬಣ್ಣದ ಜೆರ್ಸಿ ಧರಿಸಿ ಮೈದಾನಕ್ಕಿಳಿಯುವ ವಿಚಾರ ಇದೀಗ ಅಧಿಕೃತವಾಗಿದೆ.
ಇಂಡೋ ಏಷ್ಯನ್ ನ್ಯೂಸ್ ಸರ್ವೀಸಸ್ (ಐಎಎನ್‍ಎಸ್) ಇತ್ತೀಚಿನ ವರದಿಯಲ್ಲಿ ಈ ಕುರಿತು ತಿಳಿಸಿದೆ. ಐಎಎನ್‍ಎಸ್ ಪ್ರಕಟಿಸಿರುವ ಸುದ್ದಿಯ ಪ್ರಕಾರ ಈ ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾ ಧರಿಸಲಿರುವ ಬದಲಿ ಜೆರ್ಸಿ ಗಾಢ ಕೇಸರಿ ಬಣ್ಣದಿಂದ ಕೂಡಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿನ ಪ್ರಿಂಟ್ ಗಾಢ ನೀಲಿ ಬಣ್ಣದಲ್ಲಿ ಇರಲಿದೆ.
ಭಾರತ ತಂಡ ಈ ನೂತನ ಜೆರ್ಸಿಯನ್ನು ವಿಶ್ವಕಪ್‍ನ ಎರಡು ಪಂದ್ಯಗಳಿಗೆ ಮಾತ್ರ ಧರಿಸಲಿದೆ. ಜೂನ್ 22ರಂದು ಅಫ್ಘಾನಿಸ್ತಾನ ವಿರುದ್ಧ ಮತ್ತು ಜೂನ್ 30ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬಳಗ ಕೇಸರಿ ಬಣ್ಣದ ಜೆರ್ಸಿಯೊಂದಿಗೆ ಮಿಂಚಲಿದೆ. ಜುಲೈ 6ರಂದು ಶ್ರೀಲಂಕಾ ಸವಾಲು ಸ್ವೀಕರಿಸುವ ಭಾರತ, ಆ ದಿನದಿಂದ ಮತ್ತೆಲ್ಲಾ ಪಂದ್ಯಗಳಿಗೂ ಮಾಮೂಲಿ ನೀಲಿ ಜೆರ್ಸಿ ತೊಡಲಿದೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹೊಸ ನಿಯಮದ ಪ್ರಕಾರ ವಿಶ್ವಕಪ್‍ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಎರಡು ರೀತಿಯ ಜೆರ್ಸಿ ಧರಿಸಲೇಬೇಕು. ಹೀಗಾಗಿ ಎಲ್ಲಾ 9 ತಂಡಗಳು ಬದಲಿ ಜೆರ್ಸಿಗಳೊಂದಿಗೆ ಮೈದಾನಕ್ಕಿಳಿಯಲಿವೆ. ಪಾಕಿಸ್ತಾನ ತಂಡ ಮಾತ್ರ ಎಂದಿನ ಸಾಂಪ್ರದಾಯಿಕ ಜೆರ್ಸಿಯನ್ನೇ ಟೂರ್ನಿಯುದ್ಧಕ್ಕೂ ಧರಿಸಲು ಅನುಮತಿ ಪಡೆದುಕೊಂಡಿದೆ.
ಐಸಿಸಿ ನಿಯಮಗಳ ಪ್ರಕಾರ ಐಸಿಸಿ ವಿಶ್ವಕಪ್ ನ್ನು ಯಾವ ದೇಶ ಆಯೋಜಿಸುತ್ತದೆಯೋ ಆ ದೇಶದ ತಂಡಕ್ಕೆ ಯಾವುದೇ ಬಣ್ಣದ ಜೆರ್ಸಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಈಗಾಗಲೇ ಇಂಗ್ಲೆಂಡ್ ನೀಲಿ ಬಣ್ಣದ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡಿದ್ದು, ಭಾರತ ಇದಕ್ಕಿಂತ ಭಿನ್ನವಾಗಿರುವ ಬಣ್ಣದ ಜೆರ್ಸಿಯನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ಕೇಸರಿ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡಿದೆ.