ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರ ಮಟ್ಟದಲ್ಲಿ ಅತ್ಯುತ್ತಮ ನೇತೃತ್ವ ವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿಗೆ ಅಭಿನಂದನೆ ನಡೆಯಿತು.
ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಹುಮಾನ ವಿತರಿಸಿದರು. ಲೋಕಸಭೆ ಕ್ಷೇತ್ರದ ಅತ್ಯುತ್ತಮ ಸಹಾಯಕ ಚುನಾವಣೆ ಅಧಿಕಾರಿಯಾಗಿ ಮಂಜೇಶ್ವರದ ಸಹಾಯಕ ಚುನಾವಣೆ ಅಧಿಕಾರಿ , ಸಹಾಯಕ ಜಿಲ್ಲಾಧಿಕಾರಿ (ಎಲ್.ಆರ್.) ಎಸ್.ಎಲ್.ಸಜಿ ಕುಮಾರ್ ಅವರನ್ನು ಆರಿಸಲಾಗಿದೆ. ಉಳಿದ ಸಿಬ್ಬಂದಿಗೂ ಬಹುಮಾನವಿತರಿಸಲಾಯಿತು.
ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಚುನಾವಣೆ ವಿಭಾಗ ಸಹಾಯಕಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್, ಕಿರಿಯ ವರಿಷ್ಠಾಧಿಕಾರಿ ಗೋವಿಂದನ್ ರಾವಣೀಶ್ವರಂ, ಸಹಾಯಕ ಚುನಾವಣೆ ಅಧಿಕಾರಿಗಳಾದ ಪಿ.ಎ.ಅಬ್ದು ಸಮದ್, ಪಿ.ಆರ್.ರಾಧಿಕಾ, ಮಾವಿಲ ನಳಿನಿ, ಹರಿಕುಮಾರ್ ಸಿ.ಜಿ., ರಶೀದ್ ಮುಂದುಕಂಡಿ, ನೋಡೆಲ್ ಅಧಿಕಾರಿಗಳಾದ ನೌಷಾದ್ ಅರಿಕ್ಕೋಡ್, ಕೆ.ಸತೀಶನ್,ಕೆ.ನಾರಾಯಣನ್ ಮೊದಲಾದವರು ಉಪಸ್ಥಿತರಿದ್ದರು.
ಈ ಮೂಲಕ ಲೋಕಸಭೆ ಕ್ಷೇತ್ರದ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯಗೊಂಡಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.