ಮುಳ್ಳೇರಿಯ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಗಳಾದ ನಂದಿಕೇಶನ್ ಎನ್. ಅವರು ಉದ್ಘಾಟಿಸಿದರು.
ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ನಮ್ಮ ಪರಿಸರವನ್ನು ಶುಚಿಯಾಗಿಡುವುದರೊಂದಿಗೆ ಮಾನಸಿಕ ಉಲ್ಲಾಸವನ್ನೂ ಪಡೆಯಬಹುದೆಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಗಿಡಗಳನ್ನು ನೆಟ್ಟರೆ ಮಾತ್ರ ಸಾಲದು. ಅವುಗಳನ್ನು ಪೆÇೀಷಿಸುವ ಜವಾಬ್ದಾರಿಯೂ ನಮ್ಮದು ಎಂದು ಅವರು ಮಕ್ಕಳಿಗೆ ತಮ್ಮ ಕರ್ತವ್ಯವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ವೀಣಾ ಕೆ, ನಿವೃತ್ತ ತಹಶಿಲ್ದಾರ್ ರಾಧಾಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಎಲ್.ವೇಣು, ಅಧ್ಯಾಪಕರಾದ ರಮೇಶ್ ಟಿ, ಸಂದೀಪ್ ಬಿ.ಎಸ್, ಸಣ್ಣಿ ಥೋಮಸ್, ರಾಜೇಶ್ ಎಸ್.ಪಿ, ರೋಸಮ್ಮ ಎ.ಕೆ.ಜಯರಾಜನ್ ಸತ್ಯನಾರಾಯಣ ಪ್ರಕಾಶ್ ಬಿ, ನಿತ್ಯಾನಂದ, ಎಂ.ಕೆ.ಸುಮತಿ ಮೊದಲಾದವರು ಉಪಸ್ಥಿತರಿದ್ದರು.