ಉಪ್ಪಳ: ಕೇರಳ ಅರೆಬಿಕ್ ಟೀಚರ್ಸ್ ಫೆಡರೇಶನ್ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸದಸ್ಯತ್ವ ಶಿಬಿರ ಗುರುವಾರ ಸಂಜೆ ಉಪ್ಪಳದ ಸಿ.ಎಚ್.ಸೆಂಟರ್ ನಲ್ಲಿ ನಡೆಯಿತು.
ಸಂಘಟನೆಯ ರಾಜ್ಯ ಸಮಿತಿ ಮಾಜಿ ಉಪಾಧ್ಯಕ್ಷ ಎಂ.ಕೆ.ಅಲಿ ಮಾಸ್ತರ್ ಶಿಬಿರವನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಯಹಿಯಾಖಾನ್ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ್ ಕಟ್ಟತ್ತಡ್ಕ, ಬಶೀರ್ ಕಳಿಯೂರು, ಸಿದ್ದೀಖ್ ಬಾಯಾರು ಪೆರ್ವೊಡಿ,ಶಿವರಾಜ್ ಉಪ್ಪಳ, ನೌಶಾದ್ ಚಿಪ್ಪಾರ್, ರೀಯಾಸ್ ವಾಫಿ ಮುಳಿಂಜ, ಮೊಯಿದ್ದೀನ್ ಪಚ್ಚಂಬಳ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಶಿಬಿರದಲ್ಲಿ ನೂತನ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು.