ಮಂಜೇಶ್ವರ: ಕೆಎಸ್‍ಯು ಮಂಜೇಶ್ವರ ಬ್ಲಾಕ್ ಸಮಿತಿಯ ಆಶ್ರಯದಲ್ಲಿ ಮರ ಒಂದು ವರ ಹಸಿರು ವಾಹನ ಯಾತ್ರೆಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಕೆಎಸ್‍ಯು ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಅಖಿಲ್ ಮಲಪ್ಪಡಂ ಅವರು ಗೋವಿಂದ ಪೈ ಕಾಲೇಜು ಘಟಕ ಅಧ್ಯಕ್ಷ ಪ್ರಮೋದ್ ಬೇವಿಂಜೆ ಅವರಿಗೆ ಮೊದಲ ಗಿಡ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‍ಯು ಜಿಲ್ಲಾ ಕಾರ್ಯದರ್ಶಿ ಮಾರ್ಟಿನ್ ಎಬ್ರಹಾಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಮ್ಯಾನುವೆಲ್ ಸೂರಂಬೈಲು, ವಿಘ್ನೇಶ್ ಮೊಗ್ರಾಲ್, ಕೃಷ್ಣರಾಜ್, ಹರ್ಷಾದ್, ಅಮಲ್, ಅಶ್ವಥಿ, ರಮ್ಯ, ಶಾನಿಫ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕ್ಯಾಂಪಸ್‍ಗಳ ಮೂಲಕ ಹಸಿರು ವಾಹನ ಪ್ರಯಾಣ ನಡೆಸಲಿದೆ. ಕುಂಬಳೆ ಐಎಚ್‍ಆರ್‍ಡಿ, ಕುಂಬಳೆ ಅಕಾಡೆಮಿ ಕಾಲೇಜುಗಳಲ್ಲಿ ಹಸಿರು ವಾಹನದ ಮೂಲಕ ಗಿಡಗಳನ್ನು ವಿತರಿಸಲಾಗುವುದು.