HEALTH TIPS

ಎನ್ ಎಸ್ ಎ ಅಜಿತ್ ದೋವಲ್ ಮುಂದುವರಿಕೆ: ಕ್ಯಾಬಿನೆಟ್ ಸ್ಥಾನಮಾನ

     
      ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ಅವರನ್ನು ಮುಂದುವರೆಸುವುದಾಗಿ ಭಾರತ ಸರ್ಕಾರ ಘೋಷಿಸಿದೆ.
        ಮುಂದಿನ  5 ವರ್ಷಗಳ ಕಾಲ ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ.
ಪಾಕಿಸ್ತಾನ ಉಗ್ರರ ವಿರುದ್ಧ ನಡೆದ ಇತ್ತೀಚಿನ ಬಾಲಾಕೋಟ್ ಹಾಗೂ 2016 ರ ಸರ್ಜಿಕಲ್ ಸ್ಟ್ರೈಕ್ ನ ಮಾಸ್ಟರ್ ಮೈಂಡ್ ಅಜಿತ್ ದೋವಲ್ ಅವರನ್ನು 2014 ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು.
    1968 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ದೋವಲ್ ಸೇವಾವಧಿಯ ಬಹುಪಾಲು ಗುಪ್ತಚರ ಇಲಾಖೆಯಲ್ಲೇ ಕಳೆದಿದ್ದಾರೆ. ಈಗ ಅಜಿತ್ ದೋವಲ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಗುಪ್ತಚರ ವಿಭಾಗಕ್ಕೆ ಸಂಬಂಧಿಸಿ ಹಲವು ದಂತಕಥೆಗಳಿಗೆ ಈಗಾಗಲೇ ಪಾತ್ರರಾಗಿರುವ ಧೋಮಲ್ ಅವರ ಸೇವಾ ತತ್ಪರತೆಯ ನಿಖರತೆಯ ಹಿನ್ನೆಲೆಯಲ್ಲಿ ಈ ಮರು ಆಯ್ಕೆ ನಡೆದಿದೆ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries