ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ದ್ರವ್ಯಕಲಶ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸುಪ್ರಸಿದ್ಧ ಮೆಂಡಲೀನ್ ವಾದಕ ರಾಜೇಶ್ ಚೆನ್ನೈ ಅವರಿಂದ ಮೆಂಡಲೀನ್ ಕಚೇರಿ ನಡೆಯಿತು.
ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಮೃದಂಗದಲ್ಲಿ ಸಹಕರಿಸಿದರು. ರಘುರಾಮ್ ಬೆಂಗಳೂರು ವಯಲಿನ್, ಪ್ರವೀಣ ನಾರಾಯಣನ್ ತಬಲಾ, ಮತ್ತು ತ್ರಿಚ್ಚಿ ಕೆ.ಆರ್.ಕುಮಾರ್ ಅವರು ಘಟಂ ನುಡಿಸಿ ಸಹ ಕಲಾವಿದರಾಗಿ ಕಚೇರಿಯನ್ನು ಶ್ರೇಷ್ಠ ಮಟ್ಟಕ್ಕೆ ಪ್ರಸ್ತುತಪಡಿಸಿದರು. ಸೀತಾರಾಮ ಬಳ್ಳುಳ್ಳಾಯ ಕಲಾವಿದರಿಗೆ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.