ಚೆನ್ನೈ: ದೇಶಾದ್ಯಂತ ಶಾಲೆಗಳಲ್ಲಿ ತ್ರಿ ಭಾಷೆ ಶಿಕ್ಷಣ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಪ್ರಸ್ತಾವ ವಿರೋಧಿಸಿ ತಮಿಳುನಾಡು ಸರ್ಕಾರ ಹಾಗೂ ವಿರೋಧ ಪಕ್ಷಗಳು ನಿನ್ನೆ ಪ್ರತಿಭಟನೆ ನಡೆಸಿದವು.
ತಮಿಳುನಾಡು ದ್ವಿಭಾಷೆ ಶಿಕ್ಷಣ ವ್ಯವಸ್ಥೆಯನ್ನೇ ಮುಂದುವರೆಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಸೆಂಗೋಟ್ಟೈಯಾನ್ ಹೇಳಿದ್ದಾರೆ.
ದ್ವಿ ಭಾಷೆ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯ ಮುಂದುವರೆಸಲಿದೆ ಎಂದು ಸೆಂಗೋಟ್ಟೈಯನ್ ಸ್ಪಷ್ಪಪಡಿಸಿದ್ದಾರೆ. ಇಸ್ರೋ ಮಾಜಿ ಅಧ್ಯಕ್ಷ ಡಾ ಕಸ್ತೂರಿರಂಗನ್ ನೇತೃತ್ವದ ಸಮಿತಿ ನವದೆಹಲಿಯಲ್ಲಿ ಶುಕ್ರವಾರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಸಲ್ಲಿಸಿದೆ
ಪಠ್ಯಕ್ರಮದಲ್ಲಿ ಭಾರತೀಯ ಜ್ಞಾ ನ ವ್ಯವಸ್ಥೆಯನ್ನು ಸೇರಿಸುವುದು, ರಾಷ್ಟ್ರೀಯ ಶಿಕ್ಷಣ ಆಯೋಗ ಸ್ಥಾಪನೆ, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕುವುದು ಮುಂತಾದ ಶಿಫಾರಸುಗಳನ್ನು ಈ ಕರಡು ಹೊಂದಿದೆ.
ತಜ್ಞ ರ ಸಮಿತಿಯು ಎಲ್ಲಾ ಶಿಕ್ಷಕ ಸಿದ್ಧತೆ ಮತ್ತು ಶಿಕ್ಷಣ ಕಾರ್ಯಕ್ರಮಗಳನ್ನು ದೊಡ್ಡ ಬಹುಶಿಕ್ಷಣ ವಿಶ್ವವಿದ್ಯಾನಿಲಯಗಳು ಅಥವಾ ಕಾಲೇಜುಗಳಾಗಿ ಪರಿವರ್ತಿಸುವ ಮೂಲಕ ಶಿಕ್ಷಕರ ಶಿಕ್ಷಣದಲ್ಲಿ ಬೃಹತ್ ರೂಪಾಂತರವನ್ನು ಪ್ರಸ್ತಾಪಿಸಿದೆ.
ಗಣಿತಶಾಸ್ತ್ರ, ಖಗೋಳಶಾಸ್ತ್ರ, ತತ್ವಶಾಸ್ತ್ರ, ಮನಃಶಾಸ್ತ್ರ, ಯೋಗ, ವಾಸ್ತುಶಿಲ್ಪ, ಔಷಧ, ಮತ್ತು ಆಡಳಿತ, ರಾಜಕೀಯ, ಸಮಾಜ ಮತ್ತು ಭಾರತೀಯ ????ನ ವ್ಯವಸ್ಥೆಗಳ ಸಂರಕ್ಷಣಾ ಕೋರ್ಸ್ ಗಳಲ್ಲಿ ಭಾರತೀಯ ಕೊಡುಗೆಗಳನ್ನು ಒಳಗೊಂಡಿರುತ್ತದೆ.1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆರಂಭಿಸಲಾಯಿತು ಮತ್ತು 1992ರಲ್ಲಿ ಅದನ್ನು ಪರಿಷ್ಕರಿಸಲಾಯಿತು.
ತಮಿಳನಾಡಿನಲ್ಲಿ ಹಿಂದಿ ಹೇರದಂತೆ ಕೇಂದ್ರಸರ್ಕಾರದ ಮೇಲೆ ಮುಖ್ಯಮಂತ್ರಿ ಪಳನಿಸ್ವಾಮಿ ಒತ್ತಡ ತರಲಿದ್ದಾರೆ ಎಂದು ಸಹಕಾರ ಸಚಿವ ಸೆಲ್ಲೂರು ರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತ್ರಿ ಭಾಷೆಗಳ ಶಿಕ್ಷಣ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿರುವ ಡಿಎಂಕೆ ಸಂಸದ ತಿರುಚಿ ಶಿವ, ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ಬೆಂಕಿಯಲ್ಲಿ ಗೋದಾಮು ನಿರ್ಮಿಸಿದಂತೆ. ಈ ನಡೆಯ ವಿರುದ್ಧ ಡಿಎಂಕೆ ಹೋರಾಟ ಮುಂದುವರೆಸಲಿದೆ ಎಂದು ಹೇಳಿದ್ದಾರೆ.
ಹಿಂದಿ ಮಾತ್ರವಲ್ಲ, ಬೇರೆ ಯಾವುದೇ ಭಾಷೆಯಾದರೂ ಕೂಡಾ ಡಿಎಂಕೆ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲಿದೆ. ನಿರ್ಧಿಷ್ಟ ಭಾಷೆ ವಿರುದ್ಧ ಯಾವುದೇ ನೀತಿಗೆ ಅವಕಾಶ ಮಾಡಿಕೊಡಲ್ಲ ಎಂದು ಡಿಎಂಕೆ ಸಂಸದೆ ಕನ್ನಿಮೋಳಿ ಹೇಳಿದ್ದಾರೆ.
ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಕೂಡಾ ವಿರೋಧ ವ್ಯಕ್ತಪಡಿಸಿದ್ದು, ಎಂಟನೇ ತರಗತಿಯವರೆಗೂ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಆದೇಶ ಖಂಡನಾರ್ಹವಾದದ್ದು ಎಂದಿದ್ದಾರೆ.
ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಬಾರದು, ಯಾವ ಭಾಷೆಯಲ್ಲಿ ತಮ್ಮ ಮಕ್ಕಳು ಕಲಿಯಬೇಕು ಎಂಬುದನ್ನು ಪಾಲಕರೇ ನಿರ್ಧರಿಸಲಿ ಎಂದು ಕಲಾವಿದ ಹಾಗೂ ಮಕ್ಕಳ್ ನಿಧಿ ಮೈಮ್ ಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.