HEALTH TIPS

ಪರಪ್ಪ ಮುಂಡತ್ತಡಂ ಕರ್ಗಲ್ಲಕೋರೆ ಚಟುವಟಿಕೆಗೆ ತಾತ್ಕಾಲಿಕ ನಿಲುಗಡೆ ಆದೇಶ

     
      ಕಾಸರಗೋಡು:    ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ನ ಪರಪ್ಪ ಮುಂಡತ್ತಡಂ ಕರ್ಗಲ್ಲ ಕೋರೆಯ ಚಟುವಟಿಕೆ ತಾತ್ಕಾಲಿಕವಾಗಿ ನಿಲುಗಡೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿರುವರು. 
             ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಜನತೆಯ ಆತಂಕ ಪರಿಶೀಲಿಸಿ ದುರಂತ ನಿವಾರಣೆ ಕಾನೂನು ಪ್ರಕಾರ ಈ ಆದೇಶ ನೀಡಲಾಗಿದೆ ಎಂದವರು ತಿಳಿಸಿದರು.
     ಕೋರೆ ಸಂಬಂಧ ಪರಿಣತ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸೆಂಟರ್ ಫಾರ್ ಅರ್ಥ್ ಸಯನ್ಸ್ ನ ಪರಿಣತ ವಿಜ್ಞಾನಿಗಳೊಂದಿಗೆ ಮನವಿ ಮಾಡಲಾಗಿದ್ದು, ಅವರ ವರದಿಯ ಹಿನ್ನೆಲೆಯಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
        ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ತಿಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ಅಧ್ಯಕ್ಷೆ ಎ.ಮಧುಬಾಲ, ಉಪಾಧ್ಯಕ್ಷ ವಿ.ಬಾಲಕೃಷ್ಣನ್, ಡಿ.ವೈಎಸ್.ಪಿ.ಗಳಾದ ಎಂ.ಆಗಸ್ಟಿನ್, ಟಿ.ಎನ್.ಸಜೀವ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries