ಮುಳ್ಳೇರಿಯ: ಹೆತ್ತವರಿಗಾಗಿ ಜಾಗೃತಿ ಕಾರ್ಯಕ್ರಮ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ಜರುಗಿತು. ಶಾಲೆಯ ಒಂದರಿಂದ ಹತ್ತನೇ ತರಗತಿ ವರೆಗಿನ ಮಕ್ಕಳ ಪೋಷಕರಿಗಾಗಿ ಈ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರಡ್ಕ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಸಿ.ಕೆ.ಕುಮಾರನ್ ಉದ್ಘಾಟಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎ.ಕೆ.ಮಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದರು. ಮುಖ್ಯಶಿಕ್ಷಕ ಅಝೀಝ್ ಜಿ.ಮೂಸಾನ್ ವರದಿ ವಾಚಿಸಿದರು. ಸಿಬ್ಬಂದಿ ಮಂಡಳಿ ಕಾರ್ಯದರ್ಶಿ ರಾಮಚಂದ್ರ ಮಣಿಯಾಣಿ ಸ್ವಾಗತಿಸಿ, ಹಿರಿಯ ಸಹಾಯಕ ಪಿ.ಶಾರದಾ ವಂದಿಸಿದರು.ಖ್ಯಾತ ಮನೋವೈದ್ಯ ಸಾಹಿದ್ ಪಯ್ಯನ್ನೂರ್ ಜಾಗೃತಿ ತರಗತಿ ನಡೆಸಿದರು.