HEALTH TIPS

ಪುತ್ರಕಳ ಬೂಡು ಪುನರುತ್ಥಾನ ಕಾರ್ಯಕ್ಕೆ ಚಾಲನೆ-ಕಾಮಗಾರಿಯ ವೇಳೆ ಪ್ರಾಚ್ಯ ವಸ್ತುಗಳ ಪತ್ತೆ


        ಬದಿಯಡ್ಕ: ಸುಮಾರು 600 ವರುಷಗಳ ಇತಿಹಾಸ ಇರುವ ಪುತ್ರಕಳ ಬೂಡನ್ನು ಜೀರ್ಣೊದ್ಧಾರ ಕಾರ್ಯ ನಿಮಿತ್ತ ಕೆಡವಲಾಗಿದ್ದು ಈ ವೇಳೆ ಪುರಾತನವಾಗಿ ಬಳಕೆಯಲ್ಲಿದ್ದ ವಿವಿಧ ವಸ್ತುಗಳು ಪತ್ತೆಯಾದುವು. ಹಿಂದಿನ ತುಳುನಾಡಿನ ಗತ ವೈಭವವನ್ನು ಸಾರುವ ಪಡಿಪ್ಪಿರೆ,ಅತ್ಯಾಕರ್ಷಕ ಶೈಲಿಯ ಕಿಟಿಕಿ ದಾರಂದಗಳು,ಹಲವು ವಿಧದ ದಿನ ಬಳಕೆಯ ವಸ್ತುಗಳು ಪ್ರಾಚೀನತೆಯ ಜೀವಂತಿಕೆಯನ್ನು ಸಾರುವಂತಿದ್ದವು. ಜೀರ್ಣೊದ್ಧಾರ ಕಾರ್ಯದಂಗವಾಗಿ ಪ್ರಥಮ ಹಂತದ ಬೂಡು ಕೆಡಹುವ ಕಾಮಾಗಾರಿಗೆ ವಿಷ್ಣುಮೂರ್ತಿ ಯುವಕ ವೃಂದ ಪೊಡಿಪ್ಪಳ ಹಾಗೂ ಊರವರು ನೇತೃತ್ವ ನೀಡಿದರು.
      ಪುತ್ರಕಳ ಬೂಡಿನೊಳಗೆ ಪತ್ತೆಯಾದ ಈ ಪ್ರಾಚ್ಯ ವಸ್ತುಗಳನ್ನು ಯಥಾ ಸ್ಥಿತಿಯಲ್ಲಿ ಸ್ಥಳದಲ್ಲಿಯೇ ಕಾಯ್ದಿರಿಸಿ ಸಂಗ್ರಹಾಲಯವನ್ನಾಗಿಸಲು ಬೂಡಿನ ಆಡಳಿತ ಸಮಿತಿ ನಿರ್ಧರಿಸಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
       ಗತ ಇತಿಹಾಸದ ಬೂಡು:
     ಕುಂಬಳೆ ಸೀಮೆಯ ಕುಂಬ್ಡಾಜೆ ಗ್ರಾಮಕ್ಕೊಳಪಟ್ಟ  ಅತಿ ಪುರಾತನ ಕಾರಣಿಕ ಸಾನಿಧ್ಯವಾದ ಪುತ್ರಕಳ ಬೂಡು ತುಳುನಾಡಿನ ಅತ್ಯಾಕರ್ಷಕ ಶೈಲಿಯ ಪ್ರಾಚೀನತೆಯನ್ನು ಹೊಂದಿದ್ದು ಇದೀಗ ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ. ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಚಿಂತನೆಯಲ್ಲಿ ಕಂಡುಬಂದ ಪ್ರಕಾರ ಮುಳಿ ಹಾಸಿದ ಮನೆಯೊಳಗೆ ಅತಿ ಪುರಾತನ ಕಾಲದಿಂದಲೇ ನೆಲೆಯಾಗಿರುವ ಕಾರಣಿಕ ಶಕ್ತಿಗಳಾದ ಮುಡಿಪುಣ್ಣಾಯ- ಉರ್ಮಿತ್ತಾಯ ಎಂಬ ಇರುವೆರ್ ದೈವಗಳು, ಪಿಲಿಚಾಮುಂಡಿ, ಕುಂಡಂಗರ, ಮೂವೆರ್ ಧೂಮಾವತಿ, ರಕ್ತೇಶ್ವರಿ, ಕಳರಿ ಧೂಮಾವತಿ, ಕೊರತಿ, ಗುಳಿಗ ದೈವಗಳು ಸೇರಿ ಒಂದು ಕುಂದು ನಲುವತ್ತು ದೈವಗಳ  ಸಾನಿಧ್ಯವನ್ನು ಅನುಜ್ಞಾ ಕಲಶ ನಡೆಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.
       ಪುರಾತನವಾದ ಈ ಸ್ಥಳ ಸಾನಿಧ್ಯದಲ್ಲಿ ಈ ಹಿಂದೆ ರಾಜಾಡಳಿತದ ಕಾಲದಲ್ಲಿ ಇಲ್ಲಿ ಯುದ್ಧವಿದ್ಯೆಗಳನ್ನು ಕಲಿಸುತ್ತಿದ್ದ ಸ್ಥಳವಾಗಿತ್ತು ಎಂಬ ಪ್ರತೀತಿ ಇದ್ದು ಇದಕ್ಕೆ ಸಂಬಂಧಪಟ್ಟ ಆರಾಧನೆಗಳು ಪ್ರಚಲಿತದಲ್ಲಿದೆ. ತುಳುನಾಡ ಕಳರಿ ವಿದ್ಯೆಯ ಅಧಿ ದೈವವಾಗಿ ಕಳರಿ ಧೂಮಾವತೀ ದೈವದ ಆರಾಧನೆ ಇಲ್ಲಿ ವಿಶೇಷವಾಗಿದೆ.
     ಇಂತಹ ಕಾರಣಿಕ ಕ್ಷೇತ್ರವು ಪೂರ್ಣ ಜೀರ್ಣಾವಸ್ಥೆಯಲ್ಲಿದ್ದು ಸುಮಾರು ಮೂರು ದಶಕಗಳಿಂದ ನೇಮ ಪರ್ವಗಳು ಸ್ಥಗಿತಗೊಂಡಿತ್ತು. ಇದೀಗ ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದು ಶಿಲ್ಪಿಗಳ ನಿರ್ದೇಶನದಂತೆ ಬೂಡು, ದೈವಸ್ಥಾನ, ತುಳುನಾಡ ಕಳರಿ ಮೊದಲಾದ ದೈವ ಸಾನಿಧ್ಯಗಳು ಪುನರ್ ನಿರ್ಮಾಣಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries