ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿಗೆ ಒಳಪಟ್ಟ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ - ಪ್ರತಿಭಾ ಪುರಸ್ಕಾರ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ದೀಪ ಪ್ರಜ್ವಲನ ಗೊಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್, ಆಡಳಿತ ಟ್ರಸ್ಟಿ ಶ್ರೀ ಹಿರಣ್ಯ ಮಹಾಲಿಂಗ ಭಟ್, ಟ್ರಸ್ಟಿನ ಸದಸ್ಯರಾದ ಪಯ್ಯರಕೋಡಿ ಸದಾಶಿವ ಭಟ್, ಸಮಿತಿ ಸಂಚಾಲಕ ಕಟ್ಟದಮನೆ ಗೋಪಾಲಕೃಷ್ಣ ಭಟ್ ಮತ್ತು ಪ್ರಾಂಶುಪಾಲ ಅನೂಪ್ ಕೆ ಉಪಸ್ಥಿತರಿದ್ದರು. ಟ್ರಸ್ಟಿನ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ಸ್ವಾಗತಿಸಿ, ಅಧ್ಯಾಪಕ ರಾಮಕೃಷ್ಣ ಕೆ.ಬಿ ವಂದಿಸಿದರು. ಅಧ್ಯಾಪಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್, ಕಲ್ಲಡ್ಕ ಇವರಿಂದ ಗೀತಾಸಾಹಿತ್ಯ ಸಂಭ್ರಮ ಜರಗಿತು.