ಬದಿಯಡ್ಕ: ವಿಕಲಚೇತನರು ಎಲ್ಲರಂತೆ ಜೀವಿಸಲು ಅವರಿಗೆ ಅಗತ್ಯವುಳ್ಳ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿದೆ. ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಎಂತಹ ಕಷ್ಟವನ್ನೂ ಮೆಟ್ಟಿನಿಲ್ಲಬಹುದು ಎಂದು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಬದಿಯಡ್ಕದಲ್ಲಿರುವ ಬಿಆರ್‍ಸಿ ಕುಂಬಳೆಯಲ್ಲಿ ನಡೆದ ವಿಕಲಚೇತನರಿಗಿರುವ ಉಪಕರಣಗಳ ಆಯ್ಕೆಗಾಗಿ ನಡೆದ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಮಪಂಚಾಯತಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಾನಸಿಕ ತಜ್ಞ ವೈದ್ಯರುಗಳಾದ ಡಾ. ಬಾಲಸುಬ್ರಹ್ಮಣ್ಯ ಹಾಗೂ ಡಾ. ರೀತಿ ಶುಭಾಶಂಸನೆಗೈದು ವೈದ್ಯಕೀಯ ಸಲಹೆಗಳನ್ನು ನೀಡಿ ಫಲಾನುಭವಿಗಳನ್ನು ತಪಾಸಣೆ ನಡೆಸಿದರು. ಗಿರೀಶ್ ಸ್ವಾಗತಿಸಿ, ಖದೀಜತ್ ಸೆರೀನಾ ವಂದಿಸಿದರು. 62 ಮಂದಿ ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡರು.