ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಮಂಗಳವಾರ ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಜರಗುವ ಗೋಪೂಜೆ, ಗೋಪಾಲಕೃಷ್ಣ ಪೂಜೆ ಹಾಗೂ ಭಜನಾ ಸಂಕೀರ್ತನೆ ಮತ್ತು ದುರ್ಗಾಪೂಜೆಯು ಮಹಾಮಂಡಲ ಧರ್ಮ-ಕರ್ಮ ಸಹ ಕಾರ್ಯದರ್ಶಿ ವೇದಮೂರ್ತಿ ಕೇಶವ ಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲ ಸಂಸ್ಕಾರ ಪ್ರಮುಖ ನವನೀತಪ್ರಿಯ ಕೈಪ್ಪಂಗಳ ಹಾಗು ಉದಯಶಂಕರ ಅಮೈ ಇವರ ಸಹಕಾರದೊಂದಿಗೆ ಜರಗಿತು.
ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸಂಕೀರ್ತನಾ ಸೇವೆ ಈ ಸಂದರ್ಭ ನಡೆಯಿತು. ಗೋಶಾಲೆಯ ಅಧ್ಯಕ್ಷ ಜಗದೀಶ ಬಿ ಜಿ, ಕೋಶಾಧಿಕಾರಿ ಶ್ರೀಧರ ಭಟ್ ಪೆರ್ಲ, ಟ್ರಸ್ಟಿ ವಿಷ್ಣುಪ್ರಕಾಶ ಬನಾರಿ, ವಲಯ ಶ್ರೀಕಾರ್ಯರ್ತ ನಿರಂಜನ ದೇವಲೋಕ, ಉಲ್ಲೇಖ ಪ್ರಮುಖ ವೆಂಕಟ್ರಮಣ ಭಟ್ ಕೋಡುಮಾಡು, ಸಮಾಜ ಸುಕ್ಷೇಮ ಪ್ರಮುಖ ಶಿವಪ್ರಸಾದ ಪಳನ್ನೀರು ಹಾಗು ಗೋಭಕ್ತರು ಗುರುಭಕ್ತರು ಉಪಸ್ಥಿತರಿದ್ದರು.