ಕಾಸರಗೋಡು: ಪರಮ ಶಿವನ ಸಂಪ್ರೀತಿಗಾಗಿ ನಡೆಸುವ ಅತಿರುದ್ರ ಮಹಾಯಾಗದ ಮೂಲಕ ಕಲುಷಿತಗೊಂಡಿರುವ ಪರಿಸರ, ವಾತಾವರಣ ನಿರ್ಮಲಗೊಳ್ಳುವುದೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು.
ರಾಮದಾಸನಗರದ ಗಂಗೆ ದೇವರಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ 2020 ಫೆಬ್ರವರಿ 26 ರಿಂದ ಮಾರ್ಚ್ 1 ರ ತನಕ ಜರಗುವ ಅತಿರುದ್ರ ಮಹಾಯಾಗದ ಮುನ್ನುಡಿಯಾಗಿ ಕ್ಷೇತ್ರ ಸಭಾಂಗಣದಲ್ಲಿ ನಡೆದ ಬೃಹತ್ ಮಾತೃಶಕ್ತಿ ಮತ್ತು ಯುವ ಶಕ್ತಿ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಮಾಣಿಲ ಶ್ರೀ ಧಾಮದ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಧ್ವಯರು ಆಶೀರ್ವಚನ ನೀಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧಿಕಾರಿಣಿ ಚೇತನ ಅವರು ವಿಶೇಷ ಉಪನ್ಯಾಸ ನೀಡಿದರು. ಪುತ್ತೂರಿನ ಉದ್ಯಮಿ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ಔಷಧೀಯ ಗಿಡಗಳ ವಿತರಣೆಯನ್ನು ಕಾಸರಗೋಡು ಅರಣ್ಯಾಧಿಕಾರಿ ಪಿ.ಯು.ಬಿಜು ಅವರು ಸಮಾರಂಭ ಅಧ್ಯಕ್ಷ ಸಂತೋಷ್ ಕುಮಾರ್ ಅವರಿಗೆ ನೀಡಿ ಉದ್ಘಾಟಿಸಿದರು. ಬಳಿಕ ಸುಮಾರು ಸಾವಿರದಷ್ಟು ಮಂದಿಗೆ ಔಷಧ ಸಸ್ಯಗಳನ್ನು ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಹಾಗು ರಾಷ್ಟ್ರ ಮಟ್ಟದಲ್ಲಿ 31 ನೇ ರ್ಯಾಂಕ್ ಗಳಿಸಿದ ಮನ್ನಿಪ್ಪಾಡಿ ವಿವೇಕಾನಂದ ನಗರದ ಹೃದ್ಯಾಲಕ್ಷ್ಮಿ ಬೋಸ್ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು. ಸಮಾರಂಭಕ್ಕೆ ಮುನ್ನ ನಾಡಿನ ಜನರ ಆರೋಗ್ಯ ಸಂರಕ್ಷಣೆಗಾಗಿ ಧನ್ವಂತರಿ ಹವನ ಯಜ್ಞವನ್ನು ಕ್ಷೇತ್ರ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ಮುಂದಾಳುತ್ವದಲ್ಲಿ ನೆರವೇರಿಸಲಾಯಿತು.
ಸಭೆಯಲ್ಲಿ ಅತಿರುದ್ರ ಮಹಾಯಾಗದ ಪ್ರಧಾನ ಪುರೋಹಿತರಾದ ಶ್ಯಾಂ ಭಟ್, ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದ ಆಡಳಿತ ಟ್ರಿಸ್ಟಿ ಡಾ. ಅನಂತ ಕಾಮತ್, ಸುಕನ್ಯಾ ಆಸ್ರ, ಮೀನಾಕ್ಷಿ ಅನಂತ್ ಕಾಮತ್, ಆಶಾ ಉಪಾಧ್ಯಾಯ, ರಾಜಕೀಯ ನೇತಾರ ಪ್ರಮೀಳಾ ಸಿ.ನಾೈಕ್, ನಾರಾಯಣ ಸೂರ್ಲು, ಚಂದ್ರಮೋಹನ್, ಅಜಿತ್ ರೈ, ಧನುಷ್ ಕನ್ನಿಗುಡ್ಡೆ, ದಿನೇಶ್ ಶಿವಶಕ್ತಿನಗರ, ರಾಜೇಂದ್ರನ್, ರಮೇಶ್ ರೈ, ಗಣೇಶ್ ಮೀಪುಗುರಿ, ವಾರ್ಡ್ ಸದಸ್ಯ ವೆಂಕಟ್ರಮಣ ಅಡಿಗ ಸಹಿತ ಊರಿನ ನಾನಾ ಸಂಘ ಸಂಸ್ಥೆಗಳ ಹಾಗು ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಗು ದೀಪ ಸ್ತುತಿ ಹಾಡಿದರು. ದೇವರಗುಡ್ಡೆ ಕ್ಷೇತ್ರದ ಶ್ರೀ ಮಹಾದೇವ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸತೀಶ್ ಕೋಟೆಕಣಿ ಸ್ವಾಗತಿಸಿದರು. ಉದಯ ಕುಮಾರ್ ಮನ್ನಿಪ್ಪಾಡಿ ಪ್ರಾಸ್ತಾವಿಕ ನುಡಿದರು. ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಗಟ್ಟಿ ಅತಿರುದ್ರ ಮಹಾಯಾಗದ ಯಶಸ್ಸಿಗೆ ರೂಪೀಕರಿಸಿದ ಸಮಿತಿಯ ಪದಾ„ಕಾರಿಗಳ ಹೆಸರನ್ನು ಪ್ರಕಟಿಸಿದರು. ಸೇವಾ ಟ್ರಸ್ಟ್‍ನ ಅಧ್ಯಕ್ಷ ಡಾ.ಜಯಪ್ರಕಾಶ್ ನಾೈಕ್ ವಂದಿಸಿದರು.