ಪೆರ್ಲ:ಎಣ್ಮಕಜೆ ಗ್ರಾ.ಪಂ. ಕಾಟುಕುಕ್ಕೆಯ ಕೆಂಗಣಾಜೆ ಅಂಗನವಾಡಿಯಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಹರಿತ ಕೇರಳ ಮಿಶನ್ ಕ್ರಿಯಾ ಚಟುವಟಿಕೆ ಪೆನ್ಸಿಲ್ ಕ್ಯಾಂಪ್ ಮಂಗಳವಾರ ನಡೆಯಿತು.
ಗ್ರಾ.ಪಂ. ಸದಸ್ಯೆ ಮಲ್ಲಿಕಾ ಜೆ.ರೈ ಉದ್ಘಾಟಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಚಂದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಮಟ್ಟದ ಹರಿತ ಸೇನೆ ಕಾರ್ಯಕರ್ತೆ ಹರ್ಷಿತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಜೆ.ಪಿ.ಎಚ್.ಎನ್. ಶೀಜಾ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಬಾಲ ಸಭೆ ಮಕ್ಕಳಿಗೆ ಸ್ವಚ್ಛತೆಯ ಪ್ರಾತ್ಯಕ್ಷಿಕೆ ನೀಡಲಾಯಿತು. ಆಶಾ ಕಾರ್ಯಕರ್ತೆ ಜಯಂತಿ, ಅಂಗನವಾಡಿ ಶಿಕ್ಷಕಿ, ಸಹಾಯಕಿ, ಕುಟುಂಬಶ್ರೀ ಎಡಿಎಸ್ ಕಾರ್ಯಕರ್ತೆಯರು, ಮಾತೆಯರು ಉಪಸ್ಥಿತರಿದ್ದರು.