HEALTH TIPS

ವಾಚನ ವಾರ ಮತ್ತು ವಿದ್ಯಾರಂಗ ಕಲಾ ವೇದಿಕೆಯ ಉದ್ಘಾಟನೆ

         
      ಮಂಜೇಶ್ವರ: ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ವಾರ ಮತ್ತು ವಿದ್ಯಾರಂಗ ಕಲಾ ವೇದಿಕೆಯ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
       ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಗ್ರಾಮ ಪಂಚಾಯತಿ ಸದಸ್ಯೆ ಸೀತಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಅಶ್ರಫ್ ಎ.ಎಂ. ಆನೆಕಲ್ಲು ವಹಿಸಿದ್ದರು. ಮುಖ್ಯ ಶಿಕ್ಷಕಿ ರೇಣುಕ ವಿ. ಅವರು ಶುಭ ಹಾರೈಸಿದರು. ನೌಕರ ಸಂಘದ ಕಾರ್ಯದರ್ಶಿ ರವಿಶಂಕರ್ ಮಾಸ್ತರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಿ.ಎನ್.ಪಣಿಕ್ಕರ್ ಅವರ  ಜೀವನ ಚರಿತ್ರೆ ಮತ್ತು ಸಾಧನೆಯ ಕುರಿತು ವಿವರಿಸಲಾಯಿತು. ಎಲ್ಲಾ ತರಗತಿಗಳಿಗೆ ವಾರ್ತಾ ಪತ್ರಿಕೆಯನ್ನು ಹಸ್ತಾಂತರಿಸಲಾಯಿತು. ಶಿಕ್ಷಕಿ ಗೀತಾ ಪಿ. ಸ್ವಾಗತಿಸಿ, ಸಂತೋಷ್ ಕುಮಾರ್ ಕೇರಿಮಾರ್ ವಂದಿಸಿದರು. ಜೀವನ್ ಕುಮಾರ್ ಕಾರ್ಯಕ್ರಮದ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries