ಕಾಸರಗೋಡು: ಮಾನಸಿಕ ಹಾಗೂ ಶಾರೀರಿಕ ಸ್ವಸ್ಥತೆಗೆ ಯೋಗಾಭ್ಯಾಸ ಅನಿವಾರ್ಯ. ಯೋಗ ಜಗತ್ತಿಗೆ ಭಾರತ ನೀಡಿದ ಮಹಾನ್ ಕೊಡುಗೆ. ಯೋಗದಿಂದ ಭಾರತ ಇಂದು ವಿಶ್ವದಲ್ಲಿ ಗುರುತಿಸಲ್ಪಡುವುದು ಹೆಮ್ಮೆಯ ವಿಷಯ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಬಿಜೆಪಿ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಚರಿಸಿದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಜೀವನ ಜಂಜಾಟದಲ್ಲಿ ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿದೆ ಯೋಗ. ಔಷ„ಗಳಿಂದ ಗುಣಪಡಿಸಲಾಗದ ಅದೆಷ್ಟೋ ರೋಗಗಳು ಯೋಗದಿಂದ ಗುಣಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವವೇ ಯೋಗ ದಿನವನ್ನು ಆಚರಿಸುತ್ತಿದೆ ಎಂದರು.
ಯೋಗ ಅಧ್ಯಾಪಕಿ ಸ್ವಾತಿ ಕೇದಾರ್ ಯೋಗಗಳ ಬಗ್ಗೆ ಮಾಹಿತಿ ನೀಡಿ, ಯೋಗ ಅಭ್ಯಾಸ ಹಾಗು ಪ್ರದರ್ಶನ ನೀಡಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ, ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ್ ನಾರಂಪಾಡಿ, ಯುವಮೋರ್ಚಾ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ, ಕೌನ್ಸಿಲರ್‍ಗಳಾದ ಅರುಣ್ ಕುಮಾರ್ ಶೆಟ್ಟಿ, ಕೆ.ಜಿ.ಮನೋಹರ್, ಎಂ.ಶ್ರೀಲತಾ, ಗುರುಪ್ರಸಾದ್ ಪ್ರಭು ಮೊದಲಾದವರು ನೇತೃತ್ವ ನೀಡಿದರು.