ಮಂಜೇಶ್ವರ: ಕಳಿಯೂರಿನ ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರವೇಶೋತ್ಸವವು ಗುರುವಾರ ಸಂಭ್ರಮದಿಂದ ಜರಗಿತು.
ನೂತನವಾಗಿ ದಾಖಲಾದ ಮಕ್ಕಳನ್ನು ಶಾಲಾ ಸಭಾಂಗಣಕ್ಕೆ ಶಾಲಾ ಬ್ಯಾಂಡು ವಾದ್ಯದೊಂದಿಗೆ ಕರೆತರಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಗಣ್ಯ ವ್ಯಕ್ತಿಗಳಿಂದ ದೀಪ ಬೆಳೆಗಿಸುವುದರ ಮೂಲಕ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಸಂಚಾಲಕರು ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳ ಕಿಟ್ ವಿತರಿಸಿ ನೂತನ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು. ಅಧ್ಯಾಪಕರಾದ ಮಾರ್ಟಿನ್ ಡಿ'ಸೋಜ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕ ರೋಮನ್ ಸ್ವಾಗತಿಸಿ, ಮೊಹಮ್ಮದ್ ಬಶೀರ್ ವಂದಿಸಿದರು.