ಕಾಸರಗೋಡು: ಪೆರಿಯ ಕೇಂದ್ರೀಯ ವಿ.ವಿ.ಯಲ್ಲಿ ಹೊಸತಾಗಿ 4 ಕೋರ್ಸ್‍ಗಳನ್ನು ಆರಂಭಿಸಲಾಗಿದೆ.
ಎಂ.ಎ.(ಕನ್ನಡ), ಎಂ.ಕಾಂ., ಎಂ.ಬಿ.ಎ, ಎಂ.ಬಿ.ಎ(ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ ಮೆನೇಜ್‍ಮೆಂಟ್)ಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜೂ.14 ರ ವರೆಗೆ ಅವಕಾಶವಿದೆ. ಎಂಟ್ರನ್ಸ್ ಪರೀಕ್ಷೆ ಜೂ.29 ರಂದು ನಡೆಯಲಿದೆ. ಅರ್ಜಿದಾರರು ಪದವಿಯಲ್ಲಿ ಶೇ.50 ಅಂಕದೊಂದಿಗೆ ಉತ್ತೀರ್ಣರಾಗಿರಬೇಕು. ಎಸ್.ಸಿ, ಎಸ್.ಟಿ. ವಿದ್ಯಾರ್ಥಿಗಳಿಗೆ ಅಂಕದಲ್ಲಿ ಶೇ.5 ರಿಯಾಯಿತಿ ಇದೆ. ಜ.1 ರಂದು 30 ವರ್ಷ ದಾಟಬಾರದು. ಹೆಚ್ಚಿನ ಮಾಹಿತಿಗಳು ವೆಬ್‍ಸೈಟ್‍ನಿಂದ ಲಭಿಸುವುದು.