ಮಂಜೇಶ್ವರ: ಮೀಯಪದವು ಆಯುಷ್ ವಿಭಾಗದ ವತಿಯಿಂದ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವಿನಲ್ಲಿ ಯೋಗ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮ ಶುಕ್ರವಾರ ಜರಗಿತು. ಮೀಂಜ ಗ್ರಾಮ ಪಂಚಾಯತಿ ಆಯುರ್ವೇದ ವೈದ್ಯಾಧಿಕಾರಿ ಡಾ.ರಾಜರಾಮ.ಡಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಗ ಹಾಗೂ ಆರೋಗ್ಯ ಸಂರಕ್ಷಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮಂಗಳೂರು ವಿಶ್ವ ವಿದ್ಯಾನಿಲಯದ ಯೋಗ ವಿಜ್ಞಾನ ಪಾಧ್ಯಾಪಕ ಡಾ. ಅಜಿತೇಶ್.ಎನ್.ಎಚ್ ಇವರು ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ಹಾಗೂ ತರಬೇತಿಯನ್ನು ನಡೆಸಿಕೊಟ್ಟರು. ಮೀಂಜ ಗ್ರಾಮ ಪಂಚಾಯತಿಯ ಹೊಮಿಯೋ ವೈದ್ಯಾಧಿಕಾರಿ ಡಾ. ಸಮಿತಾ ಹಾಗೂ ಹಿರಿಯ ಶಿಕ್ಷಕಿ ಲಲಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಹಿರಿಯ ಅಧ್ಯಾಪಕ ಶಿವಶಂಕರ ಭಟ್ ವಂದಿಸಿದರು. ಕಿರಣ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.
ಮೀಯಪದವು ಶಾಲೆಯಲ್ಲಿ ಯೋಗ ತರಬೇತಿ
0
ಜೂನ್ 21, 2019