ಕಾಸರಗೋಡು: ಶಿಕ್ಷಣಾಲಯಗಳ 100 ಮೀಟರ್ ಸುತ್ತಳತೆಯಲ್ಲಿ ಹೊಗೆಸೊಪ್ಪಿನ ಉತ್ಪನ್ನಗಳ, ಮಾದಕ ಪದಾರ್ಥಗಳ ಮಾರಾಟ ನಡೆಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಅಬಕಾರಿ, ಪೊಲೀಸ್ ಇಲಾಖೆಗಳ ಸಹಕಾರದೊಂದಿಗೆ ತಪಾಸಣೆ ಬಿಗಿಗೊಳಿಸಲು ಜಿಲ್ಲಾಡಳಿತೆ ನಿರ್ಧರಿಸಿದೆ.
ಹೊಗೆಸೊಪ್ಪು ನಿಯಂತ್ರಣ ಯೋಜನೆಯ ಜಿಲ್ಲಾಮಟ್ಟದ ಸಂಚಲನ ಸಭೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು.
ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ, ಪದಾಧಿಕಾರಿಗಳಿಗೆ, ರಕ್ಷಕ-ಶಿಕ್ಷಕ ಸಂಘದ ಮಂದಿಗೆ ವಿಶೇಷ ತರಬೇತಿ ನೀಡಲಾಗುವುದು. ಇದರ ಅಂಗವಾಗಿ ಮೊದಲ ಹಂತದ ತರಬೇತಿ ಜುಲೈ 4,5ರಂದು ಕಾಸರಗೋಡು, ಕಾಞÂಂಗಾಡ್ ನಲ್ಲಿ ನಡೆಯಲಿದೆ. ಮಾದಕ ಪದಾರ್ಥಗಳ ಬಳಕೆ ವಿರುದ್ಧ ನಡೆಸುವ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸ್ವಯಂಸೇವಾ ಸಂಘಟನೆಗಳ ಸಹಕಾರ ಖಚಿತಪಡಿಸಲಾಗುವುದು.
ಈ ವರ್ಷ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಲಭಿಸಿದ ಕೆಲವು ಶಾಲೆಗಳಲ್ಲಿ ವಿಶೇಷ ಜಾಗೃತಿ ತರಗತಿ ನಡೆಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಎಲ್.ಎ.ಡೆಪ್ಯೂಟಿ ಕಲೆಕ್ಟರ್ ಮಾವಿಲ ನಳಿನಿ, ಡೆಪ್ಯೂಟಿ ಡಿ.ಎಂ.ಒ.ಡಾ.ಶಾಂಟಿ, ಶಿಕ್ಷಣ ಉಪನಿರ್ದೇಶಕ ಎನ್.ನಂದಿಕೇಶ, ಹೆಲ್ತ್ ಲೈನ್ ಡೈರೆಕ್ಟರ್ ಮೋಹನನ್ ಮಾಂಗಾಡ್, ಡಿ.ವೈ.ಎಸ್.ಪಿ.ಪ್ರದೀಪ್ ಕುಮಾರ್,ಕೆ.ಯು.ಎಚ್.ಎಸ್.ಕಾರ್ಯಕಾರಿ ನಿರ್ದೇಶಕ ಸಾಜು ವಿ.ಇಟ್ಟಿ ಮೊದಲಾದವರು ಉಪಸ್ಥಿತರಿದ್ದರು.