ಮಂಜೇಶ್ವರ: ಎಸ್‍ಎಸ್‍ಎ ಕಿರಿಯ ಪ್ರಾಥಮಿಕ ಶಾಲೆ ಮುಡೂರ್‍ತೋಕೆಯಲ್ಲಿ ಶಾಲಾ ಪ್ರವೇಶೋತ್ಸವವು ವಿಜೃಂಭಣೆಯಿಂದ ಜರಗಿತು.
ಪ್ರವೇಶೋತ್ಸವದ ಜೊತೆಯಲ್ಲಿ ಶಾಸಕರ ನಿಧಿಯಿಂದ ಲಭಿಸಿದ ಲ್ಯಾಪ್ ಟಾಪ್ ಉದ್ಘಾಟನೆ ಹಾಗೂ ವಿಮುಕ್ತಿ ಕಾರ್ಯಕ್ರಮವು ಜರಗಿತು. ಗ್ರಾ.ಪಂ. ಸದಸ್ಯೆ ಜೆಸಿಂತ ಡಿ'ಸೋಜ, ಮಾಜಿ ಬ್ಲಾಕ್ ಪಂಚಾಯತಿ ಅಧ್ಯಕ್ಷ ಮೂಸ, ಶಾಲಾ ಪ್ರಬಂಧಕರಾದ ದೇವಪ್ಪ ಶೆಟ್ಟಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಿದ್ದಿಕ್ ಮುಂತಾದವರು ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಶಾಲಾ ಶಿಕ್ಷಕ ಶೈಲೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಫೌಸಿಯ ವಂದಿಸಿದರು.