ಪೆರ್ಲ:ಕಾರ್ತಿಕೇಯ ಫ್ರೆಂಡ್ಸ್ ಕ್ಲಬ್ ಖಂಡೇರಿ-ಕಾಟುಕುಕ್ಕೆ ಇದರ ನೇತೃತ್ವದಲ್ಲಿ 3ನೇ ವರ್ಷದ ಉಚಿತ ಬ್ಯಾಗ್,ಬಳಪ ವಿತರಣೆ ಕಾರ್ಯಕ್ರಮ 'ಪುಟಾಣಿ ಪರ್ವ 2ಕೆ19' ಇತ್ತೀಚೆಗೆ ಕಾಟುಕುಕ್ಕೆ ಬಿಎಯುಪಿ ಶಾಲೆಯಲ್ಲಿ ನಡೆಯಿತು.
ಗ್ರಾ.ಪಂ. ಸದಸ್ಯೆ ಮಲ್ಲಿಕಾ ರೈ, ಕೃಷ್ಣ ಭಟ್ ಕುಂಚಿನಡ್ಕ, ನಾರಾಯಣ ಮಣಿಯಾಣಿ ಕಾಟುಕುಕ್ಕೆ, ಮುಖ್ಯ ಶಿಕ್ಷಕ ಗಣೇಶ್ ಭಟ್, ಕ್ಲಬ್ ಉಪಾಧ್ಯಕ್ಷ ವಿಶ್ವನಾಥ ರೈ, ಕಬೀರ್ ಅಡ್ಕಸ್ಥಳ, ಮಿಶ್ರಿಯಾ ಕರೀಮ್ ಉಪಸ್ಥಿತರಿದ್ದರು.