ಮಧೂರು: ಮಧೂರು ಗ್ರಾಮ ಪಂಚಾಯತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಐದನೇ ವಾರ್ಡ್ ನೈರ್ಮಲ್ಯ ಸಮಿತಿ ಆಶ್ರಯದಲ್ಲಿ ಐಸಿಡಿಎಸ್ ಕುಟುಂಬಶ್ರೀ ನೆರವಿನೊಂದಿಗೆ ಯೋಗ ದಿನಾಚರಣೆ ಅಂಗವಾಗಿ ಯೋಗ ತರಬೇತಿ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ಜರಗಿತು.
ಮಧೂರು ರಕ್ತೇಶ್ವರಿ ಸಂಘ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಭಾಗವತ ರವಿಶಂಕರ್ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಸದಸ್ಯ ಯೋಗೀಶ್ ಅಧ್ಯಕ್ಷತೆ ವಹಿಸಿದರು. ಹಿರಿಯ ಆರೋಗ್ಯ ಪರಿವೀಕ್ಷಕ ಸಿ.ಕೆ.ಅರುಣ್ ಕುಮಾರ್ ಯೋಗ ತರಗತಿ ನಡೆಸಿದರು. ಪುರುಷೋತ್ತಮನ್, ದೇವಕಿ, ಸ್ಮಿಜ ಶುಭಹಾರೈಸಿದರು.