ಪೆರ್ಲ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕದ ವಾರ್ಷಿಕ ಮಹಾಸಭೆ ಶನಿವಾರ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಿ. ಕೃಷ್ಣ ಪೈ, ಉಪಾಧ್ಯಕ್ಷರಾಗಿ ಟಿ. ಬಾಲಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಗಣೇಶ್ ಪ್ರಸಾದ್ ಭಟ್, ಜೊತೆ ಕಾರ್ಯದರ್ಶಿಯಾಗಿ ಜೆರೋಲ್ಡ್ ಡಿ'ಸೋಜ, ಕೋಶಾಧಿಕಾರಿಯಾಗಿ ಜಯದೇವ ಬಾಳಿಗ ಮತ್ತು 16 ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು.